ಜೂನ್ 11ರಂದು ಆರಂಭವಾಗಲಿರುವ ವಿಶ್ವಕಪ್‌ನ ಪಂದ್ಯಗಳನ್ನು ಯುನೈಟ್ 8 ಸ್ಪೋರ್ಟ್ಸ್, ಚಾನೆಲ್‌ಗಳಾದ ಯುನೈಟ್ 8 ಸ್ಪೋರ್ಟ್ಸ್ 1, ಯುನೈಟ್ 8 ಸ್ಪೋರ್ಟ್ಸ್ 1 ಎಚ್‌ಡಿ, ಸ್ಪೋರ್ಟ್ಸ್ 2 ಮತ್ತು ಸ್ಪೋರ್ಟ್ಸ್ 2 ಎಚ್‌ಡಿಯಲ್ಲಿ ಪ್ರಸಾರದ ಜತೆಗೆ ಜೀ5 ಓಟಿಟಿ ಆ್ಯಪ್‌ನಲ್ಲಿ ನೇರಪ್ರಸಾರ ಮಾಡಲಿದೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಫಿಫಾ ಆರಂಭದಲ್ಲಿ 2026 ಮತ್ತು 2030ರ ವಿಶ್ವಕಪ್‌ಗಳನ್ನು ಭಾರತದಲ್ಲಿ ನೇರಪ್ರಸಾರ ಮಾಡುವ ಹಕ್ಕು ಪಡೆಯಲು ₹950 ಕೋಟಿ ನಿಗದಿ ಮಾಡಿತ್ತು. ನಂತರ ಅದನ್ನು ₹570 ಕೋಟಿಗೆ ಇಳಿಕೆ ಮಾಡಿತ್ತು. ಪಂದ್ಯಗಳ ಆರಂಭದ ಸಮಯವು ಭಾರತದಲ್ಲಿನ ಪ್ರಸಾರಕರಿಗೆ ದೊಡ್ಡ ಸವಾಲೆನಿಸಿದ್ದು, ಸುಮಾರು ಶೇ.90 ಪಂದ್ಯಗಳು ಮಧ್ಯರಾತ್ರಿಯಿಂದ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿವೆ. ಇದು ಜಾಹೀರಾತುದಾರರನ್ನು ಆಕರ್ಷಿಸಲು ಕಷ್ಟವಾಗಿರುವುದರಿಂದ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿಲ್ಲ ಎನ್ನಲಾಗಿದೆ.