Vaibhav Suryavanshi : ಬರೋಬ್ಬರಿ 128 ವರ್ಷಗಳ ಸುದೀರ್ಘ ಅವಧಿಯ ಬಳಿಕ ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಕ್ರಿಕೆಟ್, ಒಲಿಂಪಿಕ್ಸ್‌ಗೆ ಮರಳಲು ಸಂಪೂರ್ಣ ಸಜ್ಜಾಗಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದ್ದು, ಈ ಮಹಾವೇದಿಕೆಯಲ್ಲಿ ಚಿನ್ನದ ಪದಕ ಗೆಲ್ಲಲು ಭಾರತ ತಂಡವು ಬಲಿಷ್ಠ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಈ ನಡುವೆ, ಭಾರತದ ಪರ ಎರಡು ವಿಶ್ವಕಪ್‌ಗಳನ್ನು ಆಡಿರುವ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರು ಒಲಿಂಪಿಕ್ಸ್ ತಂಡದ ಆಯ್ಕೆ ಕುರಿತಂತೆ ಬಿಸಿಸಿಐ (BCCI) ಆಯ್ಕೆಗಾರರಿಗೆ ಅತ್ಯಂತ ಪ್ರಮುಖ ಹಾಗೂ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.