ಏಕದಿನ ಕ್ರಿಕೆಟ್​ನಲ್ಲಿ ಸಚಿನ್​ ತೆಂಡುಲ್ಕರ್​ ದಾಖಲೆ ಮುರಿದ ಜಿಂಬಾಬ್ವೆಯ ಬ್ರೆಂಡನ್​ ಟೇಲರ್​!

ಏಕದಿನ ಕ್ರಿಕೆಟ್​ನಲ್ಲಿ ಸಚಿನ್​ ತೆಂಡುಲ್ಕರ್​ ದಾಖಲೆ ಮುರಿದ ಜಿಂಬಾಬ್ವೆಯ ಬ್ರೆಂಡನ್​ ಟೇಲರ್​!
ಏಕದಿನ ಕ್ರಿಕೆಟ್​ನಲ್ಲಿ ಸಚಿನ್​ ತೆಂಡುಲ್ಕರ್​ ದಾಖಲೆ ಮುರಿದ ಜಿಂಬಾಬ್ವೆಯ ಬ್ರೆಂಡನ್​ ಟೇಲರ್​!
Published on
ಹರಾರೆ: ಜಿಂಬಾಬ್ವೆಯ ಹಿರಿಯ ಬ್ಯಾಟರ್​ ಬ್ರೆಂಡನ್​ ಟೇಲರ್​ ದಿಗ್ಗಜ ಕ್ರಿಕೆಟಿಗ ಭಾರತದ ಸಚಿನ್​ ತೆಂಡುಲ್ಕರ್​ (Sachin Tendulkar) ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಸುದೀರ್ಘ ಅವಧಿಯ ಕಾಲ ಆಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಬ್ರೆಂಡನ್​ ಮಂಗಳವಾರ ಹರಾರೆಯಲ್ಲಿ ಆಸ್ಟ್ರೆಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಈ ದಾಖಲೆ ಬರೆದಿದ್ದಾರೆ.
40 ವರ್ಷದ ಬ್ರೆಂಡನ್​ ಟೇಲರ್​ ಇದೀಗ ಏಕದಿನ ಕ್ರಿಕೆಟ್​ನಲ್ಲಿ 20 ವರ್ಷ ಮತ್ತು 4 ತಿಂಗಳ ಕಾಲ ಆಡಿದಂತಾಗಿದೆ. ಈ ಮೂಲಕ ಸಚಿನ್​ ತೆಂಡುಲ್ಕರ್​ 22 ವರ್ಷ ಮತ್ತು 3 ತಿಂಗಳ ಕಾಲ ಆಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಆದರೆ ಸಚಿನ್​ ತೆಂಡುಲ್ಕರ್​ ಈ ಅವಧಿಯಲ್ಲಿ 463 ಪಂದ್ಯಗಳಲ್ಲಿ ಆಡಿ 18,426 ರನ್​ ಗಳಿಸಿದ್ದರೆ, ಬ್ರೆಂಡನ್​ ಟೇಲರ್​ 207 ಪಂದ್ಯಗಳಲ್ಲಿ ಆಡಿದ್ದಾರೆ.

ಬ್ರೆಂಡನ್​ ಟೇಲರ್​ 2004ರಲ್ಲಿ ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್​ನಲ್ಲಿ ಜಿಂಬಾಬ್ವೆಯ 2ನೇ ಗರಿಷ್ಠ (6,712) ರನ್​ ಸ್ಕೋರರ್​ ಆಗಿದ್ದು, ಆಂಡಿ ಫ್ಲವರ್​ (6,786) ದಾಖಲೆಯಿಂದ ಕೇವಲ 74 ರನ್​ ಹಿಂದಿದ್ದಾರೆ. 

ಬ್ರೆಂಡನ್​ ಟೇಲರ್​ ಈ ಹಿಂದೆ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು. ಬಳಿಕ 2022ರಲ್ಲಿ ಭ್ರಷ್ಟಾಚಾರ ನಿಗ್ರಹ ಮತ್ತು ಉದ್ದೀಪನ ನಿಗ್ರಹ ನಿಯಮಾವಳಿಗಳ ಉಲ್ಲಂನೆಗಾಗಿ ಐಸಿಸಿ ಮೂರೂವರೆ ವರ್ಷ ನಿಷೇಧ ಹೇರಿತ್ತು. ಈ ನಿಷೇಧ ಕೊನೆಗೊಂಡ ಬಳಿಕ 2025ರಲ್ಲಿ ಅವರು ಜಿಂಬಾಬ್ವೆ ತಂಡಕ್ಕೆ ಮರಳಿದ್ದರು ಮತ್ತು 2027ರಲ್ಲಿ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಆಡುವ ಹಂಬಲ ಹೊಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net