ವರದಿಗಳ ಪ್ರಕಾರ, ಬಾಲಿವುಡ್ ನಟ ರಣಬೀರ್ ಕಪೂರ್ ಆರ್‌ಸಿಬಿಯಲ್ಲಿ ಸುಮಾರು 300ರಿಂದ 350 ಕೋಟಿ ರೂ.ಗೆ ಶೇ,2ರಷ್ಟು ಷೇರು ಖರೀದಿಸಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಈ ಕುರಿತಾಗಿ ನಟನಿಂದಲೇ ಆಗಲಿ ಅಥವಾ ಐಪಿಎಲ್ ಫ್ರಾಂಚೈಸಿಯಿಂದಲೇ ಆಗಲಿ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).