ಟೀಮ್ ಇಂಡಿಯಾದ ಪ್ರಾಬಲ್ಯ ಎಷ್ಟರಮಟ್ಟಿಗೆ ಇತ್ತು ಅಂದರೆ, ಎದುರಾಳಿಗಳು ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಮಾತ್ರ ಗಳಿಸಿದರು. ಅಂದಹಾಗೆ, ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ನೇಪಾಳ ಪಾಕಿಸ್ತಾನವನ್ನು ಸೋಲಿಸಿ, ಫೈನಲ್ಗೆ ಲಗ್ಗೆ ಇಟ್ಟವು. ಇಂದು ನಡೆದ ಫೈನಲ್ನಲ್ಲಿ ನೇಪಾಳವನ್ನು ಮಣಿಸಿ ಭಾರತ ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಎತ್ತಿಹಿಡಿಯಿತು.