ಇನ್ನು ಆರ್ಸಿಬಿ ಪರ ಬೌಲಿಂಗ್ ಅಟ್ಯಾಕ್ಗಿಳಿದ ಭುವನೇಶ್ವರ್ ಕುಮಾರ್, ಸಿಎಸ್ಕೆ ಬ್ಯಾಟರ್ ಆಯುಷ್ ಮ್ಹಾತ್ರೆ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗಿ ಆಗಿ ಹೊರಹೊಮ್ಮಿದರು. ಇದು ಆರ್ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಮತ್ತೊಂದೆಡೆ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಿರುವ ಸಿಎಸ್ಕೆ, ಗೆಲುವಿನಿಂದ ಅದಾಗಲೇ ಬಹುದೂರ ಸರಿದಿದೆ.