ಟಿ20 ಪಂದ್ಯದಲ್ಲಿ 8 ವಿಕೆಟ್​ ಕಬಳಿಸಿದ ಭೂತಾನ್​ ಸ್ಪಿನ್ನರ್​!

ಟಿ20 ಪಂದ್ಯದಲ್ಲಿ 8 ವಿಕೆಟ್​ ಕಬಳಿಸಿದ ಭೂತಾನ್​ ಸ್ಪಿನ್ನರ್​!
ಟಿ20 ಪಂದ್ಯದಲ್ಲಿ 8 ವಿಕೆಟ್​ ಕಬಳಿಸಿದ ಭೂತಾನ್​ ಸ್ಪಿನ್ನರ್​!
Published on
ನವದೆಹಲಿ: ಭೂತಾನ್​ (Bhutan) ತಂಡದ ಎಡಗೈ ಸ್ಪಿನ್ನರ್​ ಸೋನಮ್​ ಯೆಶೆ (Sonam Yeshey) ಪುರುಷರ ಟಿ20 (T20 cricket) ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೊಂದರಲ್ಲಿ 8 ವಿಕೆಟ್​ ಕಬಳಿಸಿದ ವಿಶ್ವದ ಮೊದಲ ಬೌಲರ್​ ಎನಿಸಿದ್ದಾರೆ. ಭೂತಾನ್​ನ ಗೆಲೆು ಮೈಂಡ್​ಫುಲ್​ನೆಸ್​ ಸಿಟಿ ಗ್ರೌಂಡ್​ನಲ್ಲಿ ಇತ್ತೀಚೆಗೆ ನಡೆದ ಮಯನ್ಮಾರ್​ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಸೋನಮ್​ ಈ ದಾಖಲೆ ಬರೆದಿದ್ದಾರೆ.

22 ವರ್ಷದ ಅವರು 4 ಓವರ್​ಗಳ ದಾಳಿಯಲ್ಲಿ ಕೇವಲ 7 ರನ್​ ನೀಡಿ 8 ವಿಕೆಟ್​ ಕಬಳಿಸಿದರು. ಇದರೊಂದಿಗೆ, ಭೂತಾನ್​ನ 128 ರನ್​ ಸವಾಲಿಗೆ ಪ್ರತಿಯಾಗಿ ಮಯನ್ಮಾರ್​ ಕೇವಲ 45 ರನ್​ಗಳಿಗೆ ಸರ್ವಪತನ ಕಂಡಿತು. ಅಂತಾರಾಷ್ಟ್ರೀಯ ಅಥವಾ ಬೇರಾವುದೇ ಟಿ20 ಪಂದ್ಯದಲ್ಲಿ ಇದುವರೆಗೆ ಯಾವುದೇ ಬೌಲರ್​ 8 ವಿಕೆಟ್​ ಕಬಳಿಸಿರಲಿಲ್ಲ. ಮಲೇಷ್ಯಾದ ವೇಗಿ ಸ್ಯಾಜ್​ರುಲ್​ ಇದ್ರಸ್​ 2023ರಲ್ಲಿ ಚೀನಾ ವಿರುದ್ಧ 8 ರನ್​ಗಳಿಗೆ 7 ವಿಕೆಟ್​ ಕಬಳಿಸಿದ್ದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಇದುವರೆಗಿನ ಶ್ರೇಷ್ಠ ಬೌಲಿಂಗ್​ ನಿರ್ವಹಣೆಯಾಗಿತ್ತು.

ಹಾಲಿ ವರ್ಷ ಬಹರೇನ್​ನ ಅಲಿ ದಾವೂದ್​ ಭೂತಾನ್​ ವಿರುದ್ಧ 19 ರನ್​ಗಳಿಗೆ 7 ವಿಕೆಟ್​ ಕಬಳಿಸಿದ್ದರು. ನೆದರ್ಲೆಂಡ್​ನ ಕಾಲಿನ್​ ಅಕೆರ್​ಮನ್​ (18ಕ್ಕೆ 7) ಮತ್ತು ಬಾಂಗ್ಲಾದೇಶದ ಟಸ್ಕಿನ್​ ಅಹ್ಮದ್​ (19ಕ್ಕೆ 7) ಟಿ20ಯಲ್ಲಿ 7 ವಿಕೆಟ್​ ಗೊಂಚಲು ಪಡೆದಿದ್ದ ಇನ್ನಿಬ್ಬರು ಬೌಲರ್​ಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net