ಟೆಕ್ ಮಹೀಂದ್ರ ಹಾಗೂ ವಿಶ್ವ ಚೆಸ್ ಆಡಳಿತ ಮಂಡಳಿ (ಫಿಡೆ) ಜಂಟಿ ಸಹಯೋಗದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ವಿಶ್ವ ನಂ.1 ಮತ್ತು ನಾರ್ವೇಯ ಮ್ಯಾಗ್ನಸ್ ಕಾರ್ಲ್‌ಸನ್, ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಜಾವೋಖಿರ್ ಸಿಂದರೋವ್, ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್, ಅನುಭವಿ ಕೊನೇರು ಹಂಪಿ, ವಿಶ್ವ ನಂ.9 ಅರ್ಜುನ್ ಇರಿಗೈಸಿ, ವಿದಿತ್ ಗುಜರಾತಿ ಸಹಿತ ವಿಶ್ವದ ಹಲವು ತಾರೆಯರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.