Vaibhav Suryavanshi : ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ 15 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಪ್ರಸ್ತುತ ತ್ರಿಕೋನ 'ಎ' ಸರಣಿಯಲ್ಲಿ ಭಾರತ 'ಎ' ತಂಡದ ಪರವಾಗಿ ಆಡುತ್ತಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 14, 44, 21 ಹಾಗೂ 38 ರನ್‌ಗಳನ್ನು ಗಳಿಸಿ, ವೈಫಲ್ಯ ಅನುಭವಿಸಿದ್ದಾರೆ. ಜೂನ್ 15 ರಂದು ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ, ಸೂಪರ್ ಓವರ್‌ನಲ್ಲಿ ಭಾರತ 'ಎ' ತಂಡವು ಕೇವಲ 8 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು. ಈ ಪಂದ್ಯದ ಬೆನ್ನಲ್ಲೇ, ಲಂಕಾ ಆಟಗಾರ ಮತ್ತು ವೈಭವ್ ನಡುವೆ ನಡೆದ ಜಟಾಪಟಿ ಕ್ರೀಡಾ ಜಗತ್ತಿನಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಕೆಲವರು ಲಂಕಾ ಆಟಗಾರರನ್ನು ಟೀಕಿಸಿದರೆ, ಇನ್ನು ಕೆಲವರು ವೈಭವ್ ಅವರನ್ನು ಟೀಕಿಸಿದರು. ಇದೀಗ ಈ ವಿವಾದದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ಪ್ರತಿಕ್ರಿಯೆ ನೀಡಿದೆ.