ಅಂದಹಾಗೆ, ಬಿಸಿಸಿಐ ಸೂಚನೆಯಂತೆ ಭಾರತೀಯ ತಂಡದ ಉಳಿದ ಆಟಗಾರರು ಬಸ್‌ನಲ್ಲಿ ಪ್ರಯಾಣಿಸಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಆದರೆ, ಹಾರ್ದಿಕ್, ಸೂರ್ಯ ಮತ್ತು ದುಬೆ ತಮ್ಮ ಸ್ವಂತ ಕಾರುಗಳಲ್ಲಿ ಮನೆಗೆ ತೆರಳುತ್ತಿರುವುದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರ ಬೆನ್ನಲ್ಲೇ ಬಿಸಿಸಿಐ ನಿಯಮಗಳ ಚರ್ಚೆಯಾಗುತ್ತಿದೆ. ಟೂರ್ನಿಯ ನಡುವೆ ಸ್ವಂತ ಮನೆಗಳಿಗೆ ಬರುವುದು ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ ಅನ್ನೋ ಪ್ರಶ್ನೆಗಳು ಮೂಡಿಬರುತ್ತಿವೆ. ಹೀಗಾಗಿ, ಬಿಸಿಸಿಐ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.