ಆಸ್ಟ್ರೆಲಿಯಾ ಪ್ರವಾಸದ ಸೀಮಿತ ಓವರ್ ಸರಣಿ ಆಗಮಿಸಿದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ನಾಯಕ ಶುಭಮಾನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಭಾನುವಾರ ರಾತ್ರಿ ಕೋಲ್ಕತಕ್ಕೆ ಆಗಮಿಸಿದರು. ಬೆಂಗಳೂರಿನಲ್ಲಿ ಭಾರತ ಎ ಪರ ಆಡಿದ ಕೆಎಲ್ ರಾಹುಲ್, ಮೊಹಮದ್ ಸಿರಾಜ್ ಸಹಿತ ಇತರ ಆಟಗಾರರು ಸೋಮವಾರ ಕೋಲ್ಕತ ತಲುಪಿದರು.