ಬಿಸಿಬಿ ಮತ್ತು ಆಟಗಾರರನ್ನು ಕರೆದು ಸಭೆ ನಡೆಸಿದ್ದ ಬಾಂಗ್ಲಾ ಸರ್ಕಾರ, ನಾವು ಏಕೆ ನಿಮ್ಮನ್ನು ಭಾರತಕ್ಕೆ ಟಿ20 ವಿಶ್ವಕಪ್ ಟೂರ್ನಿಗೆ ಕಳುಹಿಸುತ್ತಿಲ್ಲ ಎಂಬುದನ್ನು ವಿವರಿಸಲು. ನಮಗೆ ಐಸಿಸಿಯಿಂದ ನ್ಯಾಯ ಸಿಕ್ಕಿಲ್ಲ. ನಮ್ಮ ಮನವಿಗೆ ಅವರು ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ನಾವು ವಿಶ್ವಕಪ್ ಆಡ್ತೀವೋ, ಇಲ್ಲವೋ ಗೊತ್ತಿಲ್ಲ. ಆದರೆ, ಇದು ಸಂಪೂರ್ಣ ಸರ್ಕಾರದ್ದೇ ನಿರ್ಧಾರ ಎಂದು ಅಂದಿನ ಸಭೆಯಲ್ಲಿ ಆಸಿಫ್ ಹೇಳಿದ್ದರು. ಆದರೀಗ, ಉಲ್ಟಾ ಹೊಡೆದಿದ್ದಾರೆ,(ಏಜೆನ್ಸೀಸ್).