ಭಾರತದಲ್ಲಿ ನಮ್ಮ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ, ಟಿ20 ವಿಶ್ವಕಪ್ನಲ್ಲಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಬಿಸಿಬಿ ಐಸಿಸಿಗೆ ಪತ್ರದ ಮುಖೇನ ಮನವಿ ಮಾಡಿಕೊಂಡಿತ್ತು. ಇದಕ್ಕೆ ಸ್ಪಂದಿಸದ ಐಸಿಸಿ, ತಿರಸ್ಕರಿಸುವ ಮೂಲಕ ಅಪಾರ ನಿರೀಕ್ಷೆಯಲ್ಲಿದ್ದ ಬಿಸಿಬಿಗೆ ಭಾರೀ ಮುಖಭಂಗವನ್ನೇ ಉಂಟುಮಾಡಿತು. ಹೀಗಾಗಿಯೇ, ಭಾರತಕ್ಕೆ ನಾವು ಪ್ರವಾಸ ಮಾಡಲ್ಲ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಗ್ಲಾ ತಿಳಿಸಿತು. ಆದರೀಗ, ಅದೊಂದು ನಿರ್ಧಾರದಿಂದ ಬಿಸಿಬಿಗೆ ದೊಡ್ಡ ನಷ್ಟವೇ ಉಂಟಾಗಲಿದೆ ಎಂದು ಪಿಟಿಐ ವರದಿ ಉಲ್ಲೇಖಿಸಿದೆ.