ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್: ಕರ್ನಾಟಕದ ಬಾಲಕೇಶವುಲುಗೆ ಕಂಚು

ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್: ಕರ್ನಾಟಕದ ಬಾಲಕೇಶವುಲುಗೆ ಕಂಚು
ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್: ಕರ್ನಾಟಕದ ಬಾಲಕೇಶವುಲುಗೆ ಕಂಚು
Published on

ಬೆಂಗಳೂರು: ಬ್ರೆಜಿಲ್ ಸಾವೊ ಪೌಲೊದಲ್ಲಿ ಶನಿವಾರ ಮುಕ್ತಾಯಗೊಂಡ ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಕರ್ನಾಟಕದ ಬಾಲಕೇಶವುಲು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.


ಎಸ್‌ಎಲ್ 3-ಎಸ್‌ಯು5 ವಿಭಾಗದ ಪುರುಷರ ಡಬಲ್ಸ್‌ನಲ್ಲಿ ಬಾಲಕೇಶವುಲು ಹಾಗೂ ತಮಿಳುನಾಡಿನ ದಿನೇಶ್ ರಾಜಯ್ಯ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಆರ್ಯನ್ ಶರ್ಮ-ಬಿರಿ ಥಕ್ಕರ್ ಎದುರು 21-9,21-12 ರಿಂದ ಸೋಲು ಅನುಭವಿಸಿದರು. ಇದರೊಂದಿಗೆ ಕಂಚಿನ ಪದಕಕ್ಕೆ ಸಮಾಧಾನ ಕಂಡರು. ಇದಕ್ಕೆ ಮುನ್ನ ಕ್ವಾರ್ಟರ್‌ ಫೈನಲ್‌ನಲ್ಲಿ ಆತಿಥೇಯ ಜೋನಾಥನ್ ಕಾರ್ಡೋಸೊ-ರಿಕಾರ್ಡೊ ಜೋಡಿ ಎದುರು ಗೆದ್ದು ಸೆಮಿಫೈನಲ್ ಅರ್ಹತೆ ಪಡೆದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net