ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ 2027ರ ಸೀಸನ್ ವೇಳೆಗೆ 45 ವರ್ಷ ವಯಸ್ಸನ್ನು ತಲುಪಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೊಣಕಾಲಿನ ಗಾಯ ಹಾಗೂ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಧೋನಿ, ಹಿಂದಿನ ಸೀಸನ್‌ಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ತಂಡಕ್ಕೆ ನೆರವಾಗುತ್ತಿದ್ದರು. 2027ರ ಸೀಸನ್‌ನಲ್ಲೂ ಅವರು ಅದೇ ರೀತಿಯಲ್ಲಿ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಒಂದು ವೇಳೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದಾದರೆ, ವಯಸ್ಸು ಮತ್ತು ಗಾಯದ ಸಮಸ್ಯೆಯ ಕಾರಣದಿಂದ ಧೋನಿಗೆ ಪೂರ್ತಿ ಪಂದ್ಯಗಳನ್ನು ಆಡುವುದು ಕಷ್ಟಕರವಾಗಲಿದ್ದು, ಇದು ಅವರ ನಿವೃತ್ತಿಗೆ ಕಾರಣವಾಗಬಹುದು ಎನ್ನಲಾಗಿದೆ, (ಏಜೆನ್ಸೀಸ್).