ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ (babar azam) ಎರಡು ವರ್ಷಕ್ಕೂ ಅಧಿಕ ಸಮಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಬಾಬರ್ 119 ಎಸೆತಗಳಲ್ಲಿ ಅಜೇಯ 102 ರನ್ (8 ಬೌಂಡರಿ) ಸಿಡಿಸುವ ಮೂಲಕ ಶ್ರೀಲಂಕಾ ತಂಡದ 289 ರನ್ ಸವಾಲು ಬೆನ್ನಟ್ಟಿ ಗೆಲ್ಲಲು ನೆರವಾದರು. ಈ ಮೂಲಕ ಪಾಕ್ 2&0ಯಿಂದ ಸರಣಿಯನ್ನೂ ವಶಪಡಿಸಿಕೊಂಡಿತು.
ಬಾಬರ್ 2023ರ ಆಗಸ್ಟ್ನಲ್ಲಿ ಮುಲ್ತಾನ್ನಲ್ಲಿ ನಡೆದ ನೇಪಾಳ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಕೊನೆಯದಾಗಿ ಶತಕ ಸಿಡಿಸಿದ್ದರು. 83 ಇನಿಂಗ್ಸ್ ಮತ್ತು 807 ದಿನಗಳ ಬಳಿಕ ಅವರು ಮತ್ತೆ ಶತಕ ಬಾರಿಸಿದರು. ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ ಪರ ಸರ್ವಾಧಿಕ 20 ಶತಕ ಸಿಡಿಸಿದ ಸಯೀದ್ ಅನ್ವರ್ ಅವರ ದಾಖಲೆಯನ್ನೂ ಬಾಬರ್ ಸರಿಗಟ್ಟಿದರು.