ಕೊನೆಯ ಓವರ್‌ನಲ್ಲಿ ಗೆಲುವಿಗೆ 13 ರನ್‌ಗಳು ಬೇಕಾಗಿದ್ದಾಗ, ಪ್ರಸಿದ್ಧ ಕ್ರಿಷ್ಣ ಎಸೆದ ಮೊದಲ ಎಸೆತದಲ್ಲಿ ವಿಪ್ರಜ್ ಬೌಂಡರಿ ಬಾರಿಸಿದರು. ಇದಾದ ನಂತರದ ಎಸೆತದಲ್ಲಿ ವಿಪ್ರಜ್ ಔಟಾದರು. ಈ ವೇಳೆ ಕ್ರೀಸ್‌ಗೆ ಬಂದ ಕುಲದೀಪ್ ಯಾದವ್ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಮಿಲ್ಲರ್‌ಗೆ ಸ್ಟ್ರೈಕ್ ನೀಡಿದರು. ಬಳಿಕ ಮಿಲ್ಲರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇದರೊಂದಿಗೆ, ಡೆಲ್ಲಿ ತಂಡಕ್ಕೆ ಗೆಲುವಿಗಾಗಿ ಎರಡು ಎಸೆತಗಳಲ್ಲಿ ಎರಡು ರನ್‌ಗಳು ಬೇಕಾಯಿತು. ಈ ವೇಳೆ ಮಿಲ್ಲರ್, ಸ್ಟ್ರೈಕ್‌ನಲ್ಲಿರುವುದನ್ನು ನೋಡಿ, ಡೆಲ್ಲಿ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಡೆದಿದ್ದು ಮಾತ್ರ ಬೇರೆ.