ಭಾರತ ಎ ತಂಡಕ್ಕೆ ರೋಚಕ ಜಯ: ಗಂಭೀರ್, ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ಋತುರಾಜ್

ಭಾರತ ಎ ತಂಡಕ್ಕೆ ರೋಚಕ ಜಯ: ಗಂಭೀರ್, ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ಋತುರಾಜ್
ಭಾರತ ಎ ತಂಡಕ್ಕೆ ರೋಚಕ ಜಯ: ಗಂಭೀರ್, ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ಋತುರಾಜ್
Published on
ಡಂಬುಲಾ: ಉಪನಾಯಕ ಋತುರಾಜ್ ಗಾಯಕ್ವಾಡ್ (101 ರನ್, 114 ಎಸೆತ, 6 ಬೌಂಡರಿ, 3 ಸಿಕ್ಸರ್) ಸಮಯೋಚಿತ ಶತಕ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆ ನೆರವಿನಿಂದ ಭಾರತ ಎ ತಂಡ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ವಿರುದ್ಧ 8 ರನ್‌ಗಳ ರೋಚಕ ಗೆಲುವು ಒಲಿಸಿಕೊಂಡಿತು.ಇದರೊಂದಿಗೆ ತಿಲಕ್ ವರ್ಮ ಪಡೆ ಶುಭಾರಂಭ ಕಂಡಿದೆ. 
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ತಿಲಕ್ ವರ್ಮ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ‘ವಂಡರ್ ಕಿಡ್’ ವೈಭವ್ ಸೂರ್ಯವಂಶಿ (14) ನಿರಾಸೆ ಮೂಡಿಸಿದರೆ, 16 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಭಾರತ ಎ ಆಘಾತ ಎದುರಿಸಿತು. ನಂತರ ಋತುರಾಜ್ ಹಾಗೂ ತಿಲಕ್ ವರ್ಮ (60 ರನ್, 97 ಎಸೆತ, 2 ಬೌಂಡರಿ, 1 ಸಿಕ್ಸರ್) 4ನೇ ವಿಕೆಟ್‌ಗೆ 180 ಎಸೆತಗಳಲ್ಲಿ 148 ರನ್ ಜತೆಯಾಟ ನೀಡಿದರು. ಈ ಮೂಲಕ ಭಾರತ ಎ 6 ವಿಕೆಟ್‌ಗೆ 277 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಪ್ರತಿಯಾಗಿ ಉತ್ತಮ ಆರಂಭ ಪಡೆದ ಶ್ರೀಲಂಕಾ ಎ, ನಾಯಕ ಸಹನ್ ಆರ್ಚಚಿಗೆ (74 ರನ್, 72 ಎಸೆತ, 6 ಬೌಂಡರಿ, 2 ಸಿಕ್ಸರ್) ಹೋರಾಟದಿಂದ 47 ಓವರ್‌ಗಳಲ್ಲಿ 6 ವಿಕೆಟ್‌ಗೆ 261 ರನ್‌ಗಳಿಸಿ ಸುಸ್ಥಿತಿಯಲ್ಲಿತು. ನಂತರ 11 ಎಸೆತಗಳಲ್ಲಿ ನಾಟಕೀಯ ಕುಸಿತ ಕಂಡ ಲಂಕಾ ಅಂತಿಮವಾಗಿ 48.5 ಓವರ್‌ಗಳಲ್ಲಿ 269 ರನ್‌ಗಳಿಗೆ ಸರ್ವಪತನ ಕಂಡಿತು.
ಕೊನೇ 2 ಓವರ್‌ಗಳಲ್ಲಿ 10 ರನ್ ಬೇಕಿದ್ದಾಗ ಇನಿಂಗ್ಸ್‌ನ 49ನೇ ಓವರ್ ಎಸೆದ ಅರ್ಷದ್ ಖಾನ್ ಎರಡು ವಿಕೆಟ್ ಪಡೆದರೆ, ವನುಜ ಸಹನ್ ರನೌಟ್ (23) ರನೌಟ್‌ನೊಂದಿಗೆ ಭಾರತದ ಹಾದಿ ಸುಗಮಗೊಂಡಿತು.
ಭಾರತ ಎ: 6 ವಿಕೆಟ್‌ಗೆ 277 (ವೈಭವ್ 14, ಪ್ರಭ್‌ಸಿಮ್ರನ್ 2, ಪ್ರಿಯಾಂಶ್ 32, ಋತುರಾಜ್ 101, ತಿಲಕ್ ವರ್ಮ 60, ಆಯುಷ್ 24, ಸೂರ್ಯಾಂಶ್ 26*, ಅನುಕೂಲ್ 1*, ಮೊ.ಶಿರಾಜ್ 67ಕ್ಕೆ 2). ಶ್ರೀಲಂಕಾ: 48.5 ಓವರ್‌ಗಳಲ್ಲಿ 269 (ನಿರೋಷನ್ 47, ಆವಿಷ್ಕಾ 46, ನುವನಿಡು 8, ಸಧೀರ 46, ಸಹನ್ 74, ರವಿಂದು 1, ಚಾಮಿಕ 9, ವನುಜ 23, ವಿಜಯಕಾಂತ್ 5, ಅರ್ಷದ್ 24ಕ್ಕೆ 2, ವಿಪ್ರಜ್ 46ಕ್ಕೆ 2, ಆಯುಷ್ 46ಕ್ಕೆ 2)
ಪಂದ್ಯಶ್ರೇಷ್ಠ: ಋತುರಾಜ್ ಗಾಯಕ್ವಾಡ್ 
21. ಋತುರಾಜ್ ಗಾಯಕ್ವಾಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 21ನೇ ಶತಕ ಸಿಡಿಸುವ ಮೂಲಕ ಗಂಭೀರ್, ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದರು. ತೆಂಡುಲ್ಕರ್ (60), ಕೊಹ್ಲಿ (59), ರೋಹಿತ್ (37), ಗಂಗೂಲಿ (31), ಶಿಖರ್ ಧವನ್ (30) ಅಗ್ರ ಐದು ಸ್ಥಾನದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net