ಟಿ20 ವಿಶ್ವಕಪ್: ಸಮಾಧಾನಕರ ಜಯದೊಂದಿಗೆ ಆಸ್ಟ್ರೇಲಿಯಾ ನಿರ್ಗಮನ
ಟಿ20 ವಿಶ್ವಕಪ್: ಸಮಾಧಾನಕರ ಜಯದೊಂದಿಗೆ ಆಸ್ಟ್ರೇಲಿಯಾ ನಿರ್ಗಮನ
Published on:
Copied
Follow Us
ಪಲ್ಲೆಕಿಲೆ: ಟಿ20 ವಿಶ್ವಕಪ್ನಲ್ಲಿ (T20 World Cup) ಲೀಗ್ ಹಂತದಲ್ಲೇ ಅಭಿಯಾನ ಮುಗಿಸಿರುವ ಮಾಜಿ ಚಾಂಪಿಯನ್ ಆಸ್ಟ್ರೆಲಿಯಾ ತಂಡ ಸಮಾಧಾನಕರ ಜಯದೊಂದಿಗೆ ನಿರ್ಗಮಿಸಿದೆ. ಸ್ಪಿನ್ನರ್ (Adam Zampa) ಆಡಂ ಜಂಪಾ (21ಕ್ಕೆ 4) ಮಾರಕ ದಾಳಿ ನೆರವಿನಿಂದ ಆಸೀಸ್ ತಂಡ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಓಮನ್ ಎದುರು 9 ವಿಕೆಟ್ಗಳಿಂದ ಜಯಿಸಿತು. ಇದರೊಂದಿಗೆ ಬಿ ಗುಂಪಿನಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಶುಕ್ರವಾರ ನಡೆದ ಟೂರ್ನಿಯ ಕಡೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಓಮನ್ 16.2 ಓವರ್ಗಳಲ್ಲಿ 104 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ನಾಯಕ ಮಿಚೆಲ್ ಮಾರ್ಷ್ (64*ರನ್, 33 ಎಸೆತ, 7 ಬೌಂಡರಿ, 4 ಸಿಕ್ಸರ್) ಮತ್ತು ಟ್ರಾವಿಸ್ ಹೆಡ್ (32) ಮೊದಲ ವಿಕೆಟ್ಗೆ 49 ಎಸೆತಗಳಲ್ಲಿ 93 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಅಂತಿಮವಾಗಿ ಆಸೀಸ್ 9.4 ಓವರ್ಗಳಲ್ಲೇ 1 ವಿಕೆಟ್ಗೆ 108 ರನ್ ಗಳಿಸಿ ಜಯಭೇರಿ ಬಾರಿಸಿತು.