ಏಷ್ಯನ್ ಗೇಮ್ಸ್‌: ಆಯ್ಕೆ ಟ್ರಯಲ್ಸ್‌ನ ಸೆಮಿಫೈನಲ್‌ನಲ್ಲಿ ಸೋತ ವಿನೇಶ್

ಏಷ್ಯನ್ ಗೇಮ್ಸ್‌: ಆಯ್ಕೆ ಟ್ರಯಲ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತ ವಿನೇಶ್
ಏಷ್ಯನ್ ಗೇಮ್ಸ್‌: ಆಯ್ಕೆ ಟ್ರಯಲ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತ ವಿನೇಶ್
Published on
ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪಿನಿಂದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕೊನೇಕ್ಷಣದಲ್ಲಿ ಅವಕಾಶ ಪಡೆದಿದ್ದ ಒಲಿಂಪಿಯನ್ ಕುಸ್ತಿಪಟು ವಿನೇಶ್ (Vinesh) ಫೋಗಟ್ ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಕನಸು ಭಗ್ನಗೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೊದಲ ಸ್ಪರ್ಧಾತ್ಮಕ ಟೂರ್ನಿ ಆಡಿದ 31 ವರ್ಷದ ವಿನೇಶ್, ಟ್ರಯಲ್ಸ್‌ನ 53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ 4-6 ಅಂತರದಿಂದ ಮೀನಾಕ್ಷಿ ಗೋಯತ್ ಎದುರು ಪರಾಭವಗೊಂಡರು.
ನಂತರ ಮೀನಾಕ್ಷಿ ಫೈನಲ್‌ನಲ್ಲಿ ಅಂತಿಮ್ ಪಾಂಗಲ್ ಎದುರು ಸೋಲು ಕಂಡರು. ಇದರೊಂದಿಗೆ ಅಂತಿಮ್ ಪಾಂಗಲ್ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ( Asian Games) ಅರ್ಹತೆ ಪಡೆದುಕೊಂಡರು.
ಭಾರತೀಯ ಕುಸ್ತಿ ಒಕ್ಕೂಟ (ಡಬ್ಲುೃಎ್ಐ), ವಿನೇಶ್‌ಗೆ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು. ಆದರೆ, ಇದಕ್ಕೆ ವಿನೇಶ್ ವಿರೋಧ ವ್ಯಕ್ತಪಡಿಸಿದ್ದರಿಂದ ನಿಲುವು ಬದಲಾಯಿಸಿದ ಡಬ್ಲುೃಎ್ಐ, ಕೊನೆಗೂ 53 ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ಕಣಕ್ಕಿಳಿಯಲು ಅನುಮತಿಸಿತ್ತು.
53.9 ಕೆಜಿ ತೂಕದೊಂದಿಗೆ ಮೊದಲ ಸುತ್ತಿನಲ್ಲಿ ಜ್ಯೋತಿ ಎದುರು 7-1 ರಿಂದ ಶುಭಾರಂಭ ಮಾಡಿದ ವಿನೇಶ್, ಎರಡನೇ ಸುತ್ತಿನಲ್ಲಿ ನಿಶು ವಿರುದ್ಧ 7-6 ಅಂಕಗಳಿಂದ ರೋಚಕ ಜಯ ಸಾಧಿಸಿದ್ದರು. ನಿವೃತ್ತಿ ಹಿಂಪಡೆದ ನಂತರ ಕನಿಷ್ಠ ಆರು ತಿಂಗಳ ನೋಟಿಸ್ ಅವಧಿಯನ್ನು ಪೂರ್ಣಗೊಳಿಸ ಕಾರಣ ವಿನೇಶ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಡಬ್ಲುೃಎಫ್ಐ ನಿರ್ಬಂಧ ಹೇರಿತ್ತು. ಈ ನಿರ್ಧಾರ ಪ್ರಶ್ನಿಸಿ ವಿನೇಶ್ ದೆಹಲಿ ಹೈಕೋರ್ಟ್‌ನಿಂದ ಹಸಿರು ನಿಶಾನೆ ಪಡೆದಿದ್ದರೆ, ಹೈಕೋರ್ಟ್ ತೀರ್ಪಿಗೆ ಡಬ್ಲುೃಎಫ್ಐ ಸುಪ್ರೀಂ ಕೋಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಹಿನ್ನಡೆ ಕಂಡಿತ್ತು.
ದೀಪಾಂಶಿ (50 ಕೆಜಿ), ಮನೀಶಾ ಬನ್ವಾಲ (57 ಕೆಜಿ), ಮಾನ್ಸಿ ಆಹ್ಲಾವತ್ (62 ಕೆಜಿ), ನಿಶಾ ದಹಿಯಾ (68 ಕೆಜಿ), ಪ್ರಿಯಾ ಮಲಿಕ್ (76 ಕೆಜಿ) ಇತರ ವಿಭಾಗಗಳಲ್ಲಿ ಏಷ್ಯಾಡ್‌ಗೆ ಅರ್ಹತೆ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net