ಹಾಂಕಾಂಗ್ ಎದುರು ಶತಕ ಸಿಡಿಸಿ ಹಲವು ದಾಖಲೆ ರಚಿಸಿರುವ ಸ್ಮತಿ ಮಂದನಾ ಜತೆಗೆ ಶೆಾಲಿ ವರ್ಮ ಉತ್ತಮ ಲಯದಲ್ಲಿದ್ದಾರೆ. ಬ್ಯಾಟರ್‌ಗಳಿಗೆ ಸವಾಲೊಡ್ಡಲಿರುವ ದುಬೈ ಪಿಚ್‌ನಲ್ಲಿ ಇವರಿಬ್ಬರ ಆಟವೇ ಭಾರತದ ಗೆಲುವಿಗೆ ಪ್ರಮುಖ ಕಾರಣ ಎನಿಸಿದೆ. ಆದರೆ, ಮಧ್ಯಕ್ರಮಾಂಕದಲ್ಲಿ ಪ್ರತೀಕಾ ರಾವಲ್, ರಿಚಾ , ಹರ್ಮಾನ್‌ಪ್ರೀತ್ ಕೌರ್ ಹೆಚ್ಚಿನ ರನ್ ಕೊಡುಗೆ ನೀಡಬೇಕಿದೆ. ಟಿ20 ಮಾದರಿಗೆ ಹೊಂದಿಕೊಳ್ಳಲು ಪ್ರತೀಕಾ ರಾವಲ್ ಪರದಾಡುತ್ತಿದ್ದಾರೆ. ನಂದಿನಿ ಶರ್ಮ, ಕ್ರಾಂತಿ ಗೌಡ್ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್ ನಡೆಸುತ್ತಿರವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 17 ಬಾರಿ ಮುಖಾಮುಖಿಯಾಗಿದ್ದು, ಭಾರತ 14-3 ಗೆಲುವು- ಸೋಲಿನ ದಾಖಲೆ ಹೊಂದಿದೆ. ಹರ್ಮಾನ್‌ಪ್ರೀತ್ ಪಡೆ ‘ನೋ ಹ್ಯಾಂಡ್‌ಶೇಕ್’ ಪಾಲಿಸಿ ಮುಂದುವರಿಸುವ ಸಾಧ್ಯತೆಗಳಿದ್ದು, ಟಿ20 ವಿಶ್ವಕಪ್‌ನಲ್ಲೂ ಉಭಯ ತಂಡದ ಆಟಗಾರ್ತಿಯರು ಹಸ್ತಲಾಘವ ಮಾಡಿರಲಿಲ್ಲ.