ಭಜ್ಜಿಯನ್ನು ಕಮೆಂಟರಿಯಿಂದ ಅಶ್ವಿನ್ ಹೊರಹಾಕುತ್ತಾನೆ: ಟ್ರೋಲ್​ ಮಾಡಿದವನಿಗೆ ಹರ್ಭಜನ್ ಕೊಟ್ಟ ಉತ್ತರವೇನು? Harbhajan Singh on Trolls

Harbhajan Singh on Trolls
Harbhajan Singh on Trolls
Published on
ಐಪಿಎಲ್​: ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳನ್ನು ಬಹಳ ವೇಗದಲ್ಲಿ ತಲುಪಿಸಲು ಮತ್ತು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ವೇದಿಕೆಗಳಾಗಿ ಈ ಸಾಮಾಜಿಕ ಜಾಲತಾಣಗಳನ್ನು ತಯಾರಿಸಲಾಗಿತ್ತು.
ಅದರೆ ಕಾಲಕಳೆದಂತೆ ಈ ಸೋಶಿಯಲ್​ ಮೀಡಿಯಾ ಎನ್ನುವುದು ಕೇವಲ ಟ್ರೋಲಿಂಗ್​ (Harbhajan Singh on Trolls), ರೋಸ್ಟಿಂಗ್​ಗೆ ಬಳಕೆಯಾಗುತ್ತಿರುವುದು ಚಿಂತನೀಯ ಸಂಗತಿಯಾಗಿದೆ. ನಿನ್ನೆ (ಮಾರ್ಚ್​ 28) ಯಿಂದ ಆರಂಭವಾಗಿರುವ ಐಪಿಎಲ್​ನ ಮೊದಲ ಪಂದ್ಯದಿಂದಲೇ ಈ ಟ್ರೋಲರ್​ಗಳ ಹಾವಳಿ ಶರುವಾಗಿದೆ.
ಭಜ್ಜಿಗೆ ಟ್ರೋಲರ್ಸ್​ ಹಾವಳಿ!
ನಿನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ನಡುವಿನ ಪಂದ್ಯದಲ್ಲಿ ಟಾಸ್​ ಕಮೆಂಟೇಟರ್​ಆಗಿ ವೆಸ್ಟ್​ ಇಂಡೀಸ್​ನ ಇಯಾನ್​ ಬಿಷಪ್​ ಹಾಜರಿದ್ದರು.
ಈ ಇಯಾನ್​ ಬಿಷಪ್​ ಅವರ ಫೋಟೊವನ್ನು ಬಳಸಿಕೊಂಡ ಟ್ರೋಲರ್​ ಒಬ್ಬ, ಈ ವೆಸ್ಟ್​ ಇಂಡೀಸ್​ನ ಆಟಗಾರನಿಗೆ ಗೊತ್ತಿರುವಷ್ಟು ಕ್ರಿಕೆಟ್​ ನಾಲೆಡ್ಜ್​ ನಮ್ಮ ದೇಶದ ಕಮೆಂಟೇಟರ್​ಗಳಾದ ವಿರೇಂದ್ರ ಸೆಹ್ವಾಗ್​, ನವಜೋತ್ ಸಿಧು ಮತ್ತು ಹರ್ಭಜನ್ ಸಿಂಗ್​ಗೆ ಗೊತ್ತಿಲ್ಲ ಎಂದು ಟ್ರೋಲ್ ಮಾಡಿದ್ದಾನೆ.
ಇದೇ ಟ್ರೋಲರ್​ ಇನ್ನೊಂದು ಫೋಸ್ಟ್​ನಲ್ಲಿ, ಆರ್​ ಅಶ್ವಿನ್​​ ಹಿಂದಿ ಭಾಷೆಯ ಕಮೆಂಟರಿಗೆ ಪಾದಾರ್ಪಣೆ ಮಾಡಿರುವ ವಿಷಯವನ್ನು ಎತ್ತಿಕೊಂಡು, ಹರ್ಭಜನ್ ನೀನು ಕಮೆಂಟರಿ ಬಗ್ಗೆ ಹೆಚ್ಚಿನ ಗಮನ ಕೊಡು ಇಲ್ಲದಿದ್ದರೆ ಅಶ್ವಿನ್​ ನಿನ್ನ ಸ್ಥಾನವನ್ನು ಮತ್ತೊಮ್ಮೆ ಕಸಿದುಕೊಳ್ಳುತ್ತಾನೆಂದು ಅಪಹಾಸ್ಯ ಮಾಡಿದ್ದಾನೆ.

ಟ್ರೋಲರ್ಸ್ ಮೇಲೆ ಹರ್ಭಜನ್ ಗರಂ!

ಈ ಟ್ರೋಲ್​ಗಳಿಂದ ಕೋಪಗೊಂಡ ಭಜ್ಜಿ, ಆನೆ ನಡೆಯಬೇಕಾದರೆ ನಾಯಿಗಳು ಬೊಗಳುತ್ತವೆ, ಇದಕ್ಕೆಲ್ಲಾ ನಾವು ಗಮನ ಕೊಡಬಾರದು ಎಂದು ತಿರುತೇಟು ನೀಡಿದ್ದಾರೆ. ಇನ್ನು ಅಶ್ವಿನ್ ಹೆಸರನ್ನು ಬಳಸಿ ಮಾಡಿದ ಟ್ರೋಲ್​ಗೆ ಹರ್ಭಜನ್, ನಾಯಿಗೆ ತುಪ್ಪವನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ, ಹಾಗೆಯೇ ನಿನ್ನಂತವನಿಗೆ ಬೇರೆಯವರ ಯಶಸ್ಸನ್ನು ನೋಡಲಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.
ಹೊಟ್ಟೆ ಕಿಚ್ಚಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಭಜ್ಜಿ-ಆ್ಯಶ್​!
ಹರ್ಭಜನ್ ಸಿಂಗ್ ಮತ್ತು ಆರ್​.ಅಶ್ವಿನ್​ ನಡುವೆ ಸಣ್ಣ ಮಟ್ಟದ ತಿಕ್ಕಾಟವಿದೆ ಎಂದು ಕ್ರಿಕೆಟ್​ ಜಗತ್ತಿನಲ್ಲಿ ಸುದ್ದಿ ಇರುವುದು ಸುಳ್ಳಲ್ಲ.
ಭಾರತ ತಂಡದಿಂದ ಹರ್ಭಜನ್ ಸಿಂಗ್ ಹೊರಹೋಗಲು ಆರ್​.ಅಶ್ವಿನ್​ ಅವರ ಆಗಮನವೇ ಕಾರಣ ಎಂದು ಕೆಲವರು ಹೇಳುವುದುಂಟು. ಈ ವಿಚಾರವಾಗಿ ಅಶ್ವಿನ್​ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಭಜ್ಜಿ ಮನಬಿಚ್ಚಿ ಮಾತನಾಡಿದ್ದರು.
ಮಾತಿನ ನಡುವೆ ಅಶ್ವಿನ್, ಭಜ್ಜಿ ನಿಮಗೆ ನನ್ನ ಮೇಲೆ ಹೊಟ್ಟೆ ಕಿಚ್ಚಿದೆ ಎಂದು ಬಹಳ ಜನ ಹೇಳುತ್ತಾರೆ. ಇದರ ಬಗ್ಗೆ ನಿಮ್ಮ ಹೇಳಿಕೆ ಏನು ಎಂದು ಕೇಳಿದಾಗ ಹರ್ಭಜನ್, ನಾನು ಆ ರೀತಿಯ ವ್ಯಕ್ತಿ ಎಂದು ನಿನಗೆ ಅನಿಸುತ್ತಾ? ಎಂದು ಅಶ್ವಿನ್​ಗೆ ಮರುಪ್ರಶ್ನೆ ಮಾಡಿದ್ದರು.
ಆಗ ಅಶ್ವಿನ್​, ನೋಡಿ ಹರ್ಭಜನ್, ನಿಮಗೆ ನನ್ನ ಬಗ್ಗೆ ಒಂದು ಕಾಲದಲ್ಲಿ ಬೇಸರವಿದ್ದರೂ ಅದನ್ನು ನಾನು ಪಾಸಿಟಿವ್​ ಆಗಿಯೇ ತೆಗೆದುಕೊಳ್ಳುತ್ತೆನೆ, ಏಕೆಂದರೆ ನಾವೆಲ್ಲಾ ಮನುಷ್ಯರು. ಆದ್ದರಿಂದ ನಮಲ್ಲಿ ಭಾವನೆಗಳು ಸಹಜವಾಗಿ ಬದಲಾಗುತ್ತವೆ ಎಂದು ಅವರು ಹೇಳಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net