ಮುಂಬೈ: 2026ರ ಐಪಿಎಲ್ ಕಣದಲ್ಲಿ ಕ್ರೀಡಾಪಟುಗಳಿಗಿಂತ ಆಟಗಾರರ ವೈಯಕ್ತಿಕ ಜೀವನ ಮತ್ತು 'ಗರ್ಲ್ಫ್ರೆಂಡ್ ಸಂಸ್ಕೃತಿ' ಆಗಾಗ್ಗೆ ಸುದ್ದಿಯಾಗುತ್ತಿದೆ. ಅನುಷ್ಕಾ ಶರ್ಮಾ, ಹಾರ್ದಿಕ್ ಪಾಂಡ್ಯರ ಹುಡುಗಿ ಹೀಗೆ ಅವರು ಧರಿಸಿದ್ದ ಬಟ್ಟೆ-ಬರೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದರೆ, ಈ ಪ್ರವೃತ್ತಿಯು ಈಗ ಬೇರೆ ರೀತಿಯ ವಿವಾದಕ್ಕೆ ಕಾರಣವಾಗಿದೆ. ಅದೇನು ಎಂದರೆ, ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಅರ್ಶ್ದೀಪ್ ಸಿಂಗ್ ಅವರ ಗೆಳತಿಯರು ತಂಡದ ಆಂತರಿಕ ಮಾಹಿತಿಯನ್ನು ಹೊರಗಿನವರಿಗೆ ಸೋರಿಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಬಿಸಿಸಿಐ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.