ಇನ್ನೂ 4 ವಿಕೆಟ್ ಪಡೆದರೆ ಅಪರೂಪದ ದಾಖಲೆಗೆ ಅರ್ಷದೀಪ್​ ಸಿಂಗ್ ಹೆಸರು! ಮಾಜಿ ಸ್ಪಿನ್ನರ್ ರೆಕಾರ್ಡ್​ ಬ್ರೇಕ್​​ | ​Arshdeep Singh

ಅರ್ಷದೀಪ್​ ಸಿಂಗ್​
ಅರ್ಷದೀಪ್​ ಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಭಾರತ ಮತ್ತು ನಮೀಬಿಯಾ ಮುಖಾಮುಖಿ
  • ಅಪರೂಪದ ದಾಖಲೆ ಬರೆಯಲು ವೇಗಿ ಅರ್ಷದೀಪ್ ಸಿಂಗ್ ಸಜ್ಜು
  • ಇನ್ನೂ 4 ವಿಕೆಟ್‌ಗಳ ತೆಗೆದರೆ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್​ ಹೆಸರಿನಲ್ಲಿರುವ ದಾಖಲೆ ಅರ್ಷದೀಪ್​ ತೆಕ್ಕೆಗೆ
ನವದೆಹಲಿ: ಇಂದು (ಫೆ.12) ಟಿ20 ವಿಶ್ವಕಪ್‌ನ ಭಾಗವಾಗಿ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯಕ್ಕೆ ಈಗಾಗಲೇ ಮೂವರು ಬಹುಮುಖ್ಯ ಆಟಗಾರರ ಅಲಭ್ಯತೆಯನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ ಒಂದೆಡೆಯಾದರೆ, ಇದೇ ಪಂದ್ಯದಲ್ಲಿ ಅಪರೂಪದ ದಾಖಲೆಗೆ ತನ್ನ ಹೆಸರು ಸೇರಿಸಲು ವೇಗಿ ಅರ್ಷದೀಪ್ ಸಿಂಗ್ ಸಜ್ಜಾಗಿರುವುದು ಮತ್ತೊಂದೆಡೆ.
ಜುಲೈ 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ20ಗೆ ಪದಾರ್ಪಣೆ ಮಾಡಿದ ಅರ್ಷದೀಪ್ ಸಿಂಗ್​, ಟಿ20 ಸ್ವರೂಪದ ಒಂದೇ ಆವೃತ್ತಿಯಲ್ಲಿ ಒಬ್ಬ ಬೌಲರ್ ಅತಿ ಹೆಚ್ಚು ವಿಕೆಟ್​ಗಳನ್ನು ಕಬಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಆದಾಗ್ಯೂ, ಇಂದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಏನಾದರೂ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಅವರು ಟಿ20 ವಿಶ್ವಕಪ್ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ.
ಈ ದಾಖಲೆಯನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೊಂದಿದ್ದಾರೆ. ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 24 ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ, ಅರ್ಷದೀಪ್ ಸಿಂಗ್ ಅವರ ಹೆಸರಿನಲ್ಲಿ 29 ವಿಕೆಟ್‌ಗಳಿವೆ. ಕೇವಲ 15 ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಕಬಳಿಸಿರುವ ಸಿಂಗ್​, ಇನ್ನೂ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಅಶ್ವಿನ್ ದಾಖಲೆಯನ್ನು ಹಿಂದಿಕ್ಕಿ, ತಮ್ಮದೇ ಹೊಸ ರೆಕಾರ್ಡ್​ ನಿರ್ಮಿಸಲಿದ್ದಾರೆ.
ವಿಶ್ವಾದ್ಯಂತ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಹೆಸರಿನಲ್ಲಿದೆ. ಅವರು 43 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ನಂತರದಲ್ಲಿ ಆರ್​.ಅಶ್ವಿನ್ ಮತ್ತು ಅರ್ಶ್‌ದೀಪ್ ಸಿಂಗ್ ಇದ್ದಾರೆ. ಇನ್ನುಳಿದ ಸ್ಥಾನಗಳಲ್ಲಿ, ಜಸ್ಪ್ರೀತ್ ಬುಮ್ರಾ (18 ಪಂದ್ಯಗಳಲ್ಲಿ 26 ವಿಕೆಟ್‌), ಹಾರ್ದಿಕ್ ಪಾಂಡ್ಯ (25 ಪಂದ್ಯಗಳಲ್ಲಿ 24 ವಿಕೆಟ್‌) ಮತ್ತು ರವೀಂದ್ರ ಜಡೇಜಾ (30 ಪಂದ್ಯಗಳು 22 ವಿಕೆಟ್‌) ಇದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net