ಯಾರು ಬೆಂಚ್​ನಲ್ಲೇ... ಮುಂಬೈ ಇಂಡಿಯನ್ಸ್​ನಿಂದ ಹೊರಬಂದಿದ್ದೇ ಈ ಕಾರಣಕ್ಕೆ! ಅರ್ಜುನ್ ತೆಂಡೂಲ್ಕರ್ ಬಿಚ್ಚುನುಡಿ

ಅರ್ಜುನ್ ತೆಂಡೂಲ್ಕರ್​
ಅರ್ಜುನ್ ತೆಂಡೂಲ್ಕರ್​
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅರ್ಜುನ್ ತೆಂಡೂಲ್ಕರ್
  • ಈ ವರ್ಷ ಲಖನೌ ಸೂಪರ್ ಜೈಂಟ್ಸ್​ ತಂಡದಲ್ಲಿ ಆಟ
  • ಮುಂಬೈ ತೊರೆದಿದ್ದೇಕೆ ಎಂದು ಕಡೆಗೂ ಮೌನ ಮುರಿದ ಅರ್ಜುನ್
ಮುಂಬೈ: ​​ಒಂದಷ್ಟು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​, ಇದೀಗ ಐಪಿಎಲ್​ 19ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್​ ಪರ ಆಡಲು ಸಜ್ಜಾಗಿದ್ದಾರೆ. ಎಂಐ ತಂಡದಿಂದ ಹೊರನಡೆದ ಬಳಿಕ ಎಲ್ಲಿಯೂ ತುಟಿ ಬಿಚ್ಚದ ಅರ್ಜುನ್​, ತಾವು ಫ್ರಾಂಚೈಸಿಯನ್ನು ತೊರೆದಿದ್ದೇಕೆ? ಎಂಬುದನ್ನು ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮನಬಿಚ್ಚಿ ಮಾತನಾಡಿದ ಅರ್ಜುನ್​, ಯಾರೂ ಬೆಂಚ್‌ನಲ್ಲಿ ಅವಕಾಶಗಳಿಲ್ಲದೇ ಕುಳಿತುಕೊಳ್ಳಲು ಬಯಸುವುದಿಲ್ಲ. ಆದರೆ, ನಮಗೆ ಅವಕಾಶ ಸಿಕ್ಕಾಗ, ಉತ್ತಮ ಪ್ರದರ್ಶನದಿಂದ ಕಮ್​ಬ್ಯಾಕ್​ ಮಾಡಬೇಕು ಎಂದು ಪರೋಕ್ಷವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಡುಗಿದರು.
ಇನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗರು ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ರೂಲ್​ ಬಗ್ಗೆ ಟೀಕಿಸಿದ್ದರು. ಈ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡ ಅರ್ಜುನ್, ಕ್ರಿಕೆಟ್ 11 ಆಟಗಾರರ ಆಟ. ಇದನ್ನು ಹಾಗೆಯೇ ಆಡಬೇಕು. ಪಿಕ್​ 11 ಅಂಡ್​ ಪ್ಲೇ ಆಗಿರಬೇಕು. ಏಕೆಂದರೆ, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮತ್ತು ಇತರ ಲೀಗ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಇಲ್ಲ. ಆದ್ದರಿಂದ, ನಾನು ವೈಯಕ್ತಿಕವಾಗಿ ಈ ನಿಯಮವನ್ನು ವಿರೋಧಿಸುತ್ತೇನೆ ಎಂದಿದ್ದಾರೆ.
ಪ್ರಸ್ತುತ, ಎಲ್​ಎಸ್​ಜಿ ಪರ ಆಡಲು ಸಜ್ಜಾಗಿರುವ ಅರ್ಜುನ್​, ಆಲ್​ರೌಂಡರ್​ ಆಗಿ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಯೂನಿಟ್​ನಲ್ಲಿ ಕಮಾಲ್ ಮಾಡಲು ಎದುರುನೋಡುತ್ತಿರುವ ಸಚಿನ್ ತೆಂಡೂಲ್ಕರ್ ಪುತ್ರ, ತನಗೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಿದರೂ ಓಕೆ ಎಂದು ಹೇಳಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೇಗೆ ಪ್ರದರ್ಶನ ಮಾಡಲಿದ್ದಾರೆ? ಮುಂದಿನ ದಿನಗಳಲ್ಲಿ ಅವಕಾಶಗಳು ಹೆಚ್ಚಾಗಲಿದೆಯೇ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net