ಕರ್ನಾಟಕ ಒಲಿಂಪಿಕ್ ಸಂಸ್ಥೆ ಕಾರ್ಯವೈಖರಿಗೆ ಮೆಚ್ಚುಗೆ: ಜಪಾನ್‌ನ ಕಾನ್ಸಲ್ ಜನರಲ್ ನವಾತಾ ಹಿರೋಶಿ ಭೇಟಿ
ಜಪಾನ್‌ನ ಕಾನ್ಸಲ್ ಜನರಲ್ ನವಾತ ಹಿರೋಶಿ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ ಡಾ.ಕೆ.ಗೋವಿಂದರಾಜು.
Published on:
Copied
Follow Us
ಬೆಂಗಳೂರು: ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಪಾನ್‌ನ ಕಾನ್ಸಲ್ ಜನರಲ್ (ರಾಯಭಾರಿ) ನವಾತ ಹಿರೋಶಿ, ಕರ್ನಾಟಕದ ಕ್ರೀಡಾ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು.
ಶುಕ್ರವಾರ ಕರ್ನಾಟಕ ಒಲಿಂಪಿಕ್ ಭವನಕ್ಕೆ ಭೇಟಿ ನೀಡಿದ ನವಾತಾ ಹಿರೋಶಿ, ಕೆಒಎ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜು ಅವರನ್ನು ಭೇಟಿಯಾಗಿ ಮಾತುಕತೆಯೂ ನಡೆಸಿದರು.
ಕೆಒಎ ಭವನದ ಹಾಲ್ ಆಫ್ ಫೇಮ್ ಆವರಣದಲ್ಲಿ ಅಳವಡಿಸಲಾಗಿರುವ ಒಲಿಂಪಿಯನ್ಸ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ವೀಕ್ಷಿಸಿದ ನವಾತ ಹಿರೋಶಿ, ಗೋವಿಂದರಾಜು ಅವರಿಂದ ಮಾಹಿತಿ ಪಡೆದರು.
ಜತೆಗೆ ಕಂಠೀರವ ಒಳಾಂಗಣ ಹಾಗೂ ಹೊರಾಂಗಣ ಸ್ಟೇಡಿಯಂಗಳಿಗೂ ಭೇಟಿ ನೀಡಿದರು. ಈ ವೇಳೆ ಕೆಒಎ ಪದಾಧಿಕಾರಿಗಳು ಉಪಸ್ಥಿತರಿದ್ದರು.