ಮಹಿಳಾ ಹಾಕಿ ಲೀಗ್ ಉಳಿಸಲು ಪ್ರಧಾನಿ ನರೇಂದ್ರ ಮೋದಿಗೆ ಮೊರೆ: ಸೆಲೆಬ್ರಿಟಿಗಳ ಬೆಂಬಲಕ್ಕೂ ಕರೆ

ಮಹಿಳಾ ಹಾಕಿ ಲೀಗ್ ಉಳಿಸಲು ಪ್ರಧಾನಿ ನರೇಂದ್ರ ಮೋದಿಗೆ ಮೊರೆ: ಸೆಲೆಬ್ರಿಟಿಗಳ ಬೆಂಬಲಕ್ಕೂ ಕರೆ
ಮಹಿಳಾ ಹಾಕಿ ಲೀಗ್ ಉಳಿಸಲು ಪ್ರಧಾನಿ ನರೇಂದ್ರ ಮೋದಿಗೆ ಮೊರೆ: ಸೆಲೆಬ್ರಿಟಿಗಳ ಬೆಂಬಲಕ್ಕೂ ಕರೆ
Published on

ನವದೆಹಲಿ: ಐದು ದಶಕಗಳ ನಂತರ ಎ್ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಅತ್ಯುತ್ತಮ ಸ್ಥಾನ ಪಡೆದಿರುವ ಬೆನ್ನಲ್ಲೇ, ಅನುಭವಿ ಗೋಲು ಕೀಪರ್ ಹಾಗೂ ಮಾಜಿ ನಾಯಕಿ ಸವಿತಾ ಪೂನಿಯಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಮಹಿಳಾ ಹಾಕಿ ಇಂಡಿಯಾ ಲೀಗ್ ಉಳಿಸಿ ಮತ್ತು ಬೆಂಬಲಿಸಲು ಕೇಂದ್ರ ಸರ್ಕಾರದ ಜತೆಗೆ ದೇಶದ ಪ್ರಮುಖ ಉದ್ಯಮಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಮೊರೆ ಇಟ್ಟಿದ್ದಾರೆ.


ವಿಶ್ವಕಪ್‌ನಲ್ಲಿ 5ನೇ ಸ್ಥಾನಕ್ಕೆ ನಡೆದ ಪ್ಲೇಆ್ ಪಂದ್ಯದಲ್ಲಿ ವಿಶ್ವ ನಂ.5 ಜರ್ಮನಿ ತಂಡವನ್ನು 3-1 ರಿಂದ ಮಣಿಸಿದ ಭಾರತ ತಂಡ 5ನೇ ಸ್ಥಾನ ಪಡೆಯಿತು. 1974ರ ನಂತರ ವಿಶ್ವಕಪ್‌ನಲ್ಲಿ ಭಾರತದ ಅತ್ಯುತ್ತಮ ಫಲಿತಾಂಶ ಇದಾಗಿದೆ. ಪ್ರಧಾನಿ ಮೋದಿ, ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿರುವ ಸವಿತಾ, ‘ನಮ್ಮ ಆಟಗಾರ್ತಿಯರು 52 ವರ್ಷಗಳ ನಂತರ ಹೊಸ ಇತಿಹಾಸ ಬರೆದಿದ್ದಾರೆ. ಈ ಆಟಗಾರ್ತಿಯರನ್ನು ರೂಪಿಸಿದ ‘ಮಹಿಳಾ ಹಾಕಿ ಇಂಡಿಯಾ ಲೀಗ್ (ಡಬ್ಲ್ಯುಎಚ್‌ಐಎಲ್) ಅನ್ನು ಉಳಿಸುವ ಅಗತ್ಯವಿದೆ.
ನಿಮ್ಮ ಒಂದೇ ಒಂದು ಮಾತು ಈ ಲೀಗ್‌ನ ಭವಿಷ್ಯವನ್ನು ಬದಲಾಯಿಸಬಹುದು ಎಂದು ಬರೆದುಕೊಂಡಿದ್ದಾರೆ. ಲೀಗ್ ಇಲ್ಲ ಎಂದರೆ, ಮುಂದಿನ ಪೀಳಿಗೆಯ ಆಟಗಾರ್ತಿಯರಿಲ್ಲ, ವಿಶ್ವಕಪ್ ಪದಕವೂ ಇಲ್ಲ. ಸೂಕ್ತ ಬೆಂಬಲವಿಲ್ಲದ ಲೀಗ್‌ನಿಂದಲೇ ಮಹಿಳೆಯರು 52 ವರ್ಷಗಳ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇನ್ನು ಇದರ ಮೇಲೆ ಸರಿಯಾದ ಹೂಡಿಕೆ ಮಾಡಿದರೆ ಏನೆಲ್ಲಾ ಸಾಧ್ಯ ಎಂದು ಊಹಿಸಿ! ಎಂದು ಪ್ರಶ್ನಿಸಿದ್ದಾರೆ. ಸವಿತಾ ಅವರ ಈ ಮನವಿಗೆ ಈಗ ದೇಶಾದ್ಯಂತ ವ್ಯಾಪಕ ಬೆಂಬಲವೂ ವ್ಯಕ್ತವಾಗುತ್ತಿದೆ.
ಸೆಲೆಬ್ರಿಟಿಗಳು ಹಾಗೂ ಕಾರ್ಪೊರೇಟ್ ಬೆಂಬಲಕ್ಕೆ ಕರೆ: ಮಹಿಳಾ ಹಾಕಿ ಲೀಗ್‌ಗೆ ಪ್ರಚಾರ ಹಾಗೂ ಪ್ರಾಯೋಕತ್ವ ಸೆಳೆಯಲು ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ಆರ್‌ಸಿಬಿ ್ರಾಂಚೈಸಿ ಸಹ ಒಡತಿ ಅನನ್ಯ ಬಿರ್ಲಾ, ರಿಲಯನ್ಸ್ ೌಂಡೇಷನ್ ಮುಖ್ಯಸ್ಥೆ ನೀತಾ ಅಂಬಾನಿ ಅವರಿಗೂ ಸವಿತಾ ಮನವಿ ಮಾಡಿದ್ದಾರೆ. ಜತೆಗೆ ಈಗಾಗಲೇ ಮಹಿಳಾ ಹಾಕಿಗೆ ಬೆಂಬಲ ನೀಡುತ್ತಿರುವ ಜೆಎಸ್‌ಡಬ್ಲುೃ ಸಮೂಹಕ್ಕೆ ಧನ್ಯವಾದ ತಿಳಿಸಿದ್ದಾರೆ.
ಆರ್ಥಿಕ ಮುಗ್ಗಟ್ಟು
ಏಳು ವರ್ಷಗಳ ವಿರಾಮದ ನಂತರ 2024ರಲ್ಲಿ ಪುರುಷರ ಹಾಕಿ ಲೀಗ್ ಪುನರಾರಂಭಗೊಂಡಿತು. ಇದರ ಜತೆಗೆ ಮಹಿಳಾ ವಿಭಾಗದಲ್ಲೂ ಉದ್ಘಾಟನಾ ಆವೃತ್ತಿ ಆರಂಭಿಸಲಾಯಿತು. ಆದರೆ, ತಂಡಗಳ ನಿರ್ವಹಣೆ ವೆಚ್ಚ,
ಫ್ರಾಂಚೈಸಿ ಶುಲ್ಕ ಪಾವತಿಸದಿದ್ದಕ್ಕಾಗಿ ಒಡಿಶಾ ವಾರಿಯರ್ಸ್‌ ತಂಡವನ್ನು ವಜಾಗೊಳಿಸಲಾಯಿತು. ಕಳೆದ ಋತುವಿನ ಫೈನಲಿಸ್ಟ್ ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್‌ ತಂಡವು ಆರ್ಥಿಕ ಮುಗ್ಗಟ್ಟಿನಿಂದಾಗಿ ಪ್ರಸ್ತುತ ಲೀಗ್‌ನಿಂದ ಹೊರನಡೆಯಲು ಚಿಂತಿಸುತ್ತಿದೆ. ಮಹಿಳಾ ಲೀಗ್‌ನಲ್ಲಿ 4 ತಂಡಗಳಿವೆ.
ಉಜ್ವಲ ಭವಿಷ್ಯವಿದೆ
ವಿಶ್ವಕಪ್‌ನಲ್ಲಿ 5ನೇ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ, ತಂಡದಲ್ಲಿ ಹೊಸ ಆತ್ಮವಿಶ್ವಾಸ ಮೂಡಿದೆ ಎಂದಿರುವ ಸವಿತಾ, ತಂಡದ ಈ ಬದಲಾವಣೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮುಖ್ಯಕೋಚ್ ಶೋರ್ಡ್ ಮರಿನೆ ಮತ್ತು ಹೊಸ ಸಹಾಯಕ ಸಿಬ್ಬಂದಿ ಬಂದ ನಂತರ ಡ್ರೆಸ್ಸಿಂಗ್ ರೂಮ್ ವಾತಾವರಣ ಬದಲಾಗಿದೆ. ಮೈದಾನದ ಹೊರಗೆ ಪ್ರತಿ ಆಟಗಾರ್ತಿಯೂ ಮುಕ್ತವಾಗಿ ಮಾತನಾಡಲು, ಹಾಸ್ಯ ಮಾಡಲು ವಾತಾವರಣ ಕಲ್ಪಿಸಲಾಗಿದೆ.
ಪ್ರತಿಯೊಬ್ಬರೂ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದರು. ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿ ಸೆಮಿಫೈನಲ್ ಅವಕಾಶ ಕೈತಪ್ಪಿದಾಗ ಭಾವುಕರಾಗಿದ್ದ ಸವಿತಾ, ಜರ್ಮನಿ ವಿರುದ್ಧ ಗೆದ್ದಾಗ ಕಣ್ಣೀರಿಟ್ಟರು. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ಮಹಿಳಾ ತಂಡ, ಈ ವಿಶ್ವಕಪ್‌ನಲ್ಲೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದು ಸಂಕಷ್ಟದಲ್ಲಿತ್ತು. ಜತೆಗೆ ಇಡೀ ಟೂರ್ನಿಯಲ್ಲಿ ನಾವು ಕೇವಲ ಒಂದೇ ಒಂದು ಪಂದ್ಯ ಮಾತ್ರ ಸೋತಿದ್ದೆವು. ಆದ್ದರಿಂದ 5ನೇ ಸ್ಥಾನ ಪಡೆದು ಪ್ರಪಂಚಕ್ಕೆ ನಮ್ಮ ಸಾಮರ್ಥ್ಯ ತೋರಿಸಬೇಕಿತ್ತು ಎಂದಿರುವ ಸವಿತಾ, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವುದು ನಮ್ಮ ಮುಂದಿನ ಗುರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net