ಹೌದು, ಒಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕಡೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಬ್ಯಾಟಿಂಗ್ಗೆ ಫ್ಯಾನ್ಸ್ ಕೇಕೆ, ಘೋಷಣೆಗಳನ್ನು ಕೂಗುತ್ತಿದ್ದರೆ, ಮತ್ತೊಂದು ಕಡೆ ಕ್ರಿಕೆಟ್ ಪ್ರೇಮಿಗಳು ಮನಸೋತಿದ್ದು ಅನುಷ್ಕಾ ಶರ್ಮಾರ ಪಂಜಾಬಿ ಸ್ಟೈಲ್ನ ಡ್ಯಾನ್ಸ್ಗೆ. ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ಅನುಷ್ಕಾ ಶರ್ಮಾ, ಅದಕ್ಕೆ ತಕ್ಕಂತೆ ಮುಖಕ್ಕೆ ಹಚ್ಚಿದ್ದ ಸಿಂಪಲ್ ಮೇಕಪ್ ಸ್ಟನ್ನಿಂಗ್ ಆಗಿತ್ತು. ಹಾಲ್ಗೆನ್ನೆಯ ಹೊಳಪು..ನಕ್ಕಾಗ ವಜ್ರದಂತೆ ಅಳೆಯುವ ಹಲ್ಲು ಕಣ್ ಮಿಟುಕಿಸದೆ ನೋಡುವಂತೆ ಮಾಡಿತ್ತು.