ಬೆಂಗಳೂರು ಸ್ಟಾಲಿಯನ್ಸ್ ತಂಡವು ತ್ರಿಶೂಲ್ ಚಿನ್ನಪ್ಪ, ವೀರ್ ಗಣಪತಿ, ಸನ್‌ಹಿತ್ ಬಿಷ್ಣೋಯಿ ಮತ್ತು ಸುಧೀರ್ ಶರ್ಮ ಅವರನ್ನೊಳಗೊಂಡ ಅನುಭವ ಹಾಗೂ ಯುವ ಪ್ರತಿಭೆಗಳ ಮಿಶ್ರಿತ ತಂಡವಾಗಿದೆ. ತ್ರಿಶೂಲ್ ಚಿನ್ನಪ್ಪ ಅವರು ಭಾರತ ಮತ್ತು ವಿದೇಶಗಳಲ್ಲಿ ಸ್ಪರ್ಧಿಸಿರುವ ಅನುಭವಿ ವೃತ್ತಿಪರ ಆಟಗಾರರಾಗಿದ್ದಾರೆ. ಭಾರತದ ಗಾಲ್ಫ್ ಆಟಗಾರ ಮತ್ತು ತರಬೇತುದಾರ ರಾಹುಲ್ ಗಣಪತಿ ಅವರ ಪುತ್ರ ವೀರ್ ಗಣಪತಿ, ಕಳೆದ ವರ್ಷದವರೆಗೂ ಭಾರತದ ನಂಬರ್ 1 ಜೂನಿಯರ್ ಗಾಲ್ಫರ್ ಆಗಿದ್ದರು. ಬಿಷ್ಣೋಯಿ ಮತ್ತು ಶರ್ಮ ತಮ್ಮದೇ ಆದ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ.