ಅಲ್‌ಪೈನ್-ಗಂಗಾಸ್ ಪ್ರಶಸ್ತಿ ಫೈಟ್: ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್‌ ಸೋತರೂ ಫೈನಲ್‌ಗೇರಿದ ಹಾಲಿ ಚಾಂಪಿಯನ್

ಅಲ್‌ಪೈನ್-ಗಂಗಾಸ್ ಪ್ರಶಸ್ತಿ ಫೈಟ್: ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್‌ ಸೋತರೂ ಫೈನಲ್‌ಗೇರಿದ ಹಾಲಿ ಚಾಂಪಿಯನ್
ಅಲ್‌ಪೈನ್-ಗಂಗಾಸ್ ಪ್ರಶಸ್ತಿ ಫೈಟ್: ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್‌ ಸೋತರೂ ಫೈನಲ್‌ಗೇರಿದ ಹಾಲಿ ಚಾಂಪಿಯನ್
Published on
ಬೆಂಗಳೂರು: ಹಾಲಿ ಚಾಂಪಿಯನ್ ಅಲ್‌ಪೈನ್ ಪೈಪರ್ಸ್‌ ಹಾಗೂ ಗಂಗಾಸ್ ಗ್ರಾಂಡ್ ಮಾಸ್ಟರ್ಸ್‌ ತಂಡಗಳು ಗ್ಲೋಬಲ್ ಚೆಸ್ ಲೀಗ್ 4ನೇ ಆವೃತ್ತಿಯ ಪ್ರಶಸ್ತಿಗಾಗಿ ಹೋರಾಡಲಿವೆ. ಲೀಗ್ ತನ್ನ ಕೊನೇ ಪಂದ್ಯಗಳಲ್ಲಿ ಸೋಲು ಅನುಭವಿಸಿದ ನಡುವೆಯೂ ಎರಡು ತಂಡಗಳು ಅಂಕಪಟ್ಟಿಯ ಅಗ್ರ 2ರಲ್ಲಿ ಸ್ಥಾನ ಕಾಯ್ದುಕೊಂಡವು.
ಟೆಕ್ ಮಹೀಂದ್ರಾ ಹಾಗೂ ಫಿಡೆ ಜಂಟಿಯಾಗಿ ಉದ್ಯಾನ ನಗರಿಯಲ್ಲಿ ಆಯೋಜಿಸಿರುವ ರ‌್ಯಾಪಿಡ್ ಚೆಸ್ ಲೀಗ್‌ನ 8ನೇ ದಿನವಾದ ಶನಿವಾರದ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ 11-6 ರಿಂದ ಅಲ್‌ಪೈನ್ ಪೈಪರ್ಸ್‌ಗೆ ಸೋಲುಣಿಸಿತು. ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್‌ಗೆ ಅಲೆರೆಜಾ ಫಿರೋಜಾ ಶಾಕ್ ನೀಡಿದರೆ, ವಿದಿತ್ ಗುಜರಾತಿ, ಅರವಿಂದ ಚಿದಂಬರಂ ವಿರುದ್ಧ ಪರಾಭವಗೊಂಡರು. ಇದರೊಂದಿಗೆ ಅಲ್‌ಪೈನ್ ಪೈಪರ್ಸ್‌ (ಒಟ್ಟು 88 ಅಂಕ) 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ನಂತರ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ನೇತೃತ್ವದ ಪಿಬಿಜಿ ಅಲಸ್ಕನ್ ನೈಟ್ಸ್ 9-7 ರಿಂದ ಅಗ್ರಸ್ಥಾನಿ ಗಂಗಾಸ್ ಗ್ರಾಂಡ್ ಮಾಸ್ಟರ್ಸ್‌ (95 ಅಂಕ) ಎದುರು ಗೆಲುವು ಒಲಿಸಿಕೊಂಡಿತು.
ನಿರ್ಣಾಯಕ ಪಂದ್ಯದಲ್ಲಿ ಫೈಯರ್ಸ್‌ ಅಮೆರಿಕನ್ ಗ್ಯಾಂಬಿಟ್ಸ್ ತಂಡ (ಒಟ್ಟು 86 ಅಂಕ) 6-11 ರಿಂದ ಚೆಕ್ ಯು ಮುಂಬಾ (85 ಅಂಕ) ಎದುರು ಪರಾಭವಗೊಂಡಿತು.ಇದರೊಂದಿಗೆ ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶದಿಂದ ವಂಚಿತಗೊಂಡಿತು. ಎರಡು ತಂಡಗಳು ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇಆ್ ಪಂದ್ಯದಲ್ಲಿ ಮರು ಮುಖಾಮುಖಿ ಆಗಲಿವೆ. ಕಾಂಟಿನೆಂಟಲ್ ಕಿಂಗ್ಸ್ (81) ಹಾಗೂ ಅಲಸ್ಕನ್ ನೈಟ್ಸ್ (80) ತಂಡಗಳು ಕ್ರಮವಾಗಿ 5, 6ನೇ ಸ್ಥಾನಕ್ಕೆ ತೃಪ್ತಿಪಟ್ಟವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net