ಸತತ 6 ಸಿಕ್ಸರ್​ ಸಿಡಿಸಿದ ಟೋಬಿ ಅಲ್ಬರ್ಟ್​! ಆದರೆ ಒಂದೇ ಓವರ್​ನಲ್ಲಲ್ಲ!

ಸತತ 6 ಸಿಕ್ಸರ್​ ಸಿಡಿಸಿದ ಟೋಬಿ ಅಲ್ಬರ್ಟ್​! ಆದರೆ ಒಂದೇ ಓವರ್​ನಲ್ಲಲ್ಲ!
ಸತತ 6 ಸಿಕ್ಸರ್​ ಸಿಡಿಸಿದ ಟೋಬಿ ಅಲ್ಬರ್ಟ್​! ಆದರೆ ಒಂದೇ ಓವರ್​ನಲ್ಲಲ್ಲ!
Published on

ನವದೆಹಲಿ: ಇಂಗ್ಲೆಂಡ್​ನ ಒನ್​ಡೇ ಕಪ್​ ಏಕದಿನ ಟೂರ್ನಿಯಲ್ಲಿ ಹ್ಯಾಂಪ್​ಶೈರ್​ ಬ್ಯಾಟರ್​ ಟೋಬಿ ಅಲ್ಬರ್ಟ್ (

Toby Albert

)​ ಸಸೆಕ್ಸ್​ ವಿರುದ್ಧದ ಪಂದ್ಯದಲ್ಲಿ ಸತತ 6 ಎಸೆತಗಳಲ್ಲಿ ಸಿಕ್ಸರ್​ ಸಿಡಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಟೋಬಿ ಅಲ್ಬರ್ಟ್​ ಎರಡು ಓವರ್​ಗಳ ಸತತ 6 ಎಸೆತಗಳಲ್ಲಿ ಸಿಕ್ಸರ್​ ಸಿಡಿಸಿ ಹ್ಯಾಂಪ್​ಶೈರ್​ ತಂಡ 9 ವಿಕೆಟ್​ಗೆ 383 ರನ್​ ಕಲೆಹಾಕಲು ನೆರವಾದರು. ಅವರು 37 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್​ ಸಹಿತ 86 ರನ್​ ಸಿಡಿಸಿದರು.


ನ್ಯಾಂಟೆಸ್​ ಓಸ್ತುಯಿಜೆನ್​ ಎಸೆದ ಇನಿಂಗ್ಸ್​ನ 43ನೇ ಓವರ್​ನ ಕೊನೇ 2 ಎಸೆತಗಳಲ್ಲಿ ಸಿಕ್ಸರ್​ ಬಾರಿಸಿದ ಅಲ್ಬರ್ಟ್​, ಬಳಿಕ ಒಲಿ ಕೀರ್ಟ್ಲಿ ಎಸೆದ ಮರು ಓವರ್​ನ ಮೊದಲ 4 ಎಸೆತಗಳಲ್ಲಿ ಸಿಕ್ಸರ್​ ಸಿಡಿಸಿದರು. ಒಂದೇ ಓವರ್​ನ ಎಲ್ಲ 6 ಎಸೆತಗಳಲ್ಲಿ ಸಿಕ್ಸರ್​ ಬಾರಿಸಿರುವ ಗ್ಯಾರಿ ಸೋಬರ್ಸ್​, ರವಿಶಾಸ್ತ್ರಿ, ಯುವರಾಜ್​ ಸಿಂಗ್​, ಹರ್ಶಲ್​ ಗಿಬ್ಸ್​ ಮುಂತಾದವರ ದಾಖಲೆಗಿಂತ ಅಲ್ಬರ್ಟ್​ ಸಾಧನೆ ಭಿನ್ನವಾಗಿ ನಿಂತಿತು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net