ಈ ವಿಷಯವನ್ನು ಆಕೃತಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಖಚಿತಪಡಿಸಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರವಾಗುತ್ತಿದ್ದೇವೆ. ನಮ್ಮಿಬ್ಬರ ಗುರಿ ಮತ್ತು ದಾರಿಗಳು ಬೇರೆ ಬೇರೆಯಾಗಿವೆ ಎಂಬುದನ್ನು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ ಪೃಥ್ವಿ ಶಾ ಅವರ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಕಳೆದ ಮಾರ್ಚ್ನಲ್ಲಷ್ಟೇ ಸರಳ ಸಮಾರಂಭದ ಮೂಲಕ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಬಳಿಕ ಪೃಥ್ವಿ ಶಾ ಐಪಿಎಲ್ನಲ್ಲಿ ಡೆಲ್ಲಿ ತಂಡದ ಭಾಗವಾಗಿದ್ದ ಸಮಯದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು. "ನನಗೆ ಹಲವು ಬಾರಿ ಮೋಸವಾಗಿದೆ' ಎಂದು ಆಕೃತಿ ಕಳೆದ ಜುಲೈನಲ್ಲಿ ಪೃಥ್ವಿ ಶಾ ಹೆಸರು ಉಲ್ಲೇಖಿಸದೆ ಹಾಕಿದ ಪೋಸ್ಟ್ನಿಂದಲೇ ಇವರಿಬ್ಬರ ನಡುವೆ ಒಡಕು ಮೂಡಿರುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು.