ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹಾಗೂ ಪಿಸಿಬಿ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ, ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಆಗಮಿಸಿದಾಗಲೇ ಹರ್ಮನ್ಪ್ರೀತ್ ಕೌರ್ ಪಡೆಯ ಟ್ರೋಫಿಗೆ ಮುತ್ತಿಡುವ ಕನಸು ಕಮರಿ ಹೋಯಿತು. ಆದರೂ, ಗೆದ್ದು ಅಹಂಕಾರದ, ನರಿ ಬುದ್ಧಿ ತೋರುವ ಪಾಕಿಸ್ತಾನಿಯ ಮುಂದೆ ಸಂಭ್ರಮವನ್ನು ತೋರಿಸೋಣ ಎಂದು ಪಣತೊಟ್ಟ ಟೀಮ್ ಇಂಡಿಯಾ, ಅಂದುಕೊಂಡಂತೆ ಭರ್ಜರಿ ಗೆಲುವಿನ ಮೂಲಕ ನಖ್ವಿಗೆ ಮೊದಲ ಹಂತದ ಉತ್ತರ ನೀಡಿತು.