ಸೋತರೂ ಸಹ ಗುಜರಾತ್ ಟೈಟನ್ಸ್ ಹೆಚ್ಚುವರಿ ಪಾಯಿಂಟ್ಗಳಿಂದ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಸೀಸನ್ ಆರಂಭದಲ್ಲಿ ಮೊದಲ ಆರು ಪಂದ್ಯಗಳಲ್ಲಿ ಐದು ಸೋಲುಗಳನ್ನು ಅನುಭವಿಸಿದ ಕೆಕೆಆರ್, ಈಗ ಕ್ರಿಕೆಟ್ ಪ್ರೇಮಿಗಳೇ ಬೆರಗಾಗುವಂತೆ ಪ್ರದರ್ಶನ ನೀಡಿ, ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸುತ್ತಿದೆ. ಪ್ರಸ್ತುತ, 12 ಪಂದ್ಯಗಳಿಂದ 11 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ರಹಾನೆ ಪಡೆ, ಮೂರನೇ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್‌ಗಿಂತ ಕೇವಲ ಮೂರು ಅಂಕಗಳಿಂದ ಹಿಂದಿದೆ ಅಷ್ಟೇ. ಉಳಿದ ಎರಡು ಪಂದ್ಯಗಳಲ್ಲಿಯೂ ಗೆದ್ದರೆ, 15 ಅಂಕಗಳಿಂದ ಪ್ಲೇಆಫ್ ಕನಸನ್ನು ಈಡೇರಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿದೆ.