

ನವದೆಹಲಿ: ಭಾರತ ತಂಡ ಸೆಪ್ಟೆಂಬರ್ 13ರಿಂದ ಅಫ್ಘಾನಿಸ್ತಾನದ ಆತಿಥ್ಯದಲ್ಲಿ ನವದೆಹಲಿಯಲ್ಲಿ ಆಡಲಿರುವ 3 ಪಂದ್ಯಗಳ ಟಿ20 ಸರಣಿಯ (
india vs afghanistan t20 series
) ಟಿವಿ ಪ್ರಸಾರ ನಿರ್ಮಾಣ ಮತ್ತು ವಾಣಿಜ್ಯ ಹಕ್ಕುಗಳನ್ನು ಪಾಕಿಸ್ತಾನ ಮೂಲದ ಟ್ರಾನ್ಸ್ ಗ್ರೂಪ್ಗೆ ನೀಡಲಾಗಿದೆ. ಭಾರತದಲ್ಲಿ ನಡೆಯುವ ಸರಣಿಯೊಂದರ ಹಕ್ಕನ್ನು ಪಾಕ್ ಕಂಪನಿಗೆ ನೀಡಿರುವುದು ಇದೀಗ ವಿವಾದಕ್ಕೀಡಾಗಿದೆ.
ಟ್ರಾನ್ಸ್ ಗ್ರೂಪ್ ಕಂಪನಿಯು ಪಾಕಿಸ್ತಾನ ಸೂಪರ್ ಲೀಗ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಜತೆಗೆ ನಿಕಟ ಸಂಪರ್ಕ ಹೊಂದಿದೆ. ಭಾರತ-ಆಫ್ಘನ್ ಸರಣಿಯ ವಿಡಿಯೋ ಚಿತ್ರೀಕರಣದ ಹೊಣೆಯನ್ನೂ ಈ ಕಂಪನಿಗೆ ವಹಿಸಲಾಗಿದೆ. ಜತೆಗೆ ಭಾರತದಿಂದ ಹೊರಗೆ ಪಂದ್ಯಗಳ ಪ್ರಸಾರ ಹಕ್ಕು ಕೂಡ ಪಡೆದುಕೊಂಡಿದೆ.
ಭಾರತದಲ್ಲಿ ಮಾತ್ರ ಫ್ಯಾನ್ಕೋಡ್ಗೆ ಪ್ರಸಾರ ಹಕ್ಕು ನೀಡಲಾಗಿದೆ. ಈ ಸರಣಿಯ ಆತಿಥ್ಯ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯದ್ದಾಗಿದ್ದು, ಇದರಿಂದ ಬರುವ ಆದಾಯವೂ ಅದಕ್ಕೇ ಸೇರಲಿದೆ.