"ಅಫ್ಘಾನ್ ಕೆಣಕಿ ಉಳಿದವರಿಲ್ಲ" ವೈಮಾನಿಕ ದಾಳಿ ಬೆನ್ನಲ್ಲೇ ಪಾಕ್​ಗೆ ಎಚ್ಚರಿಕೆ ನೀಡಿದ ಸ್ಪಿನ್ನರ್​ ಅಲ್ಲಾಗಜನ್‌ಫರ್! Allah Ghazanfar

(ಚಿತ್ರ X)
(ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಕಾಬೂಲ್‌ನ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ ಹಿನ್ನಲೆ
  • ರ್​ ಅಂತರರಾಷ್ಟ್ರೀಯ ಸಮುದಾಯಕ್ಕೆ ಭಾವನಾತ್ಮಕ ಸಂದೇಶ ಕಳುಹಿಸಿದ ಸ್ಪಿನ್ನರ್​ ಅಲ್ಲಾ ಗಜನ್​​ಫರ್​
  • ದಾಳಿಯಲ್ಲಿ ಸುಮಾರು 400 ಜನರು ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
Allah Ghazanfar: ಕಾಬೂಲ್‌ನ ಪುನರ್ವಸತಿ ಕೇಂದ್ರದ ಮೇಲೆ ದಾಳಿ ನಡೆಸಿದ ನಂತರ ಅಫ್ಘಾನಿಸ್ತಾನದ ಸ್ಪಿನ್ನರ್​ ಅಲ್ಲಾ ಗಜನ್​​ಫರ್​ ಅಂತರರಾಷ್ಟ್ರೀಯ ಸಮುದಾಯಕ್ಕೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ.
ಸಂಘರ್ಷದ ಬಗ್ಗೆ ಮಾತನಾಡಿದ ಅಲ್ಲಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ದಾಳಿಯಿಂದ ಸುಮಾರು 400 ಜನರು ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್ ನೀಡಿರುವ ಮಾಹಿತಿ ಪ್ರಕಾರ, ರಾತ್ರಿ ಸುಮಾರು 9 ಗಂಟೆಗೆ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ದಾಳಿ ನಡೆದಿದೆ.  ಆಸ್ಪತ್ರೆಯು 2,000 ಹಾಸಿಗೆಗಳ ಸೌಲಭ್ಯವನ್ನು ಹೊಂದಿದ್ದು, ದಾಳಿಯ ತೀವ್ರತೆಗೆ ಆಸ್ಪತ್ರೆಯ ಬಹುದೊಡ್ಡ ಭಾಗಗಳು ಸಂಪೂರ್ಣವಾಗಿ ಧ್ವಂಸವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಪಾಕಿಸ್ತಾನವು ಈ ಆರೋಪವನ್ನು ನಿರಾಕರಿಸಿದೆ. ಇಂತಹ ದಾಳಿಗಳು ಸಾಮಾನ್ಯ ಜನರನ್ನು ಹಾಳು ಮಾಡಬಹುದು. ಅಲ್ಲಿನ ಜನರ ಬಳಿ ಚಿಕಿತ್ಸೆಗೆ ಹಣವಿಲ್ಲ. ಕನಿಷ್ಠ ಸೌಲಭ್ಯಗಳ ನಡುವೆ ಚಿಕಿತ್ಸೆ ನೀಡುತ್ತಿದ್ದ ಕೇಂದ್ರವನ್ನೇ ಗುರಿಯಾಗಿಸಿಕೊಂಡಿರುವುದು ಅತ್ಯಂತ ಕ್ರೂರ ಎಂದು ಅವರು ಖಂಡಿಸಿದ್ದಾರೆ.

ವೈಮಾನಿಕ ದಾಳಿಯನ್ನು ಖಂಡಿಸಿದ ಗಜನ್‌ಫರ್ 

ಅವರು ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಏನು ತಪ್ಪಿಲ್ಲದ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಳ್ಳುವುದು ಹೇಡಿತನ. ಹಾಗಾಗಿ ನಾವು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಫ್ಘಾನಿಸ್ತಾನದ ಇತಿಹಾಸ ಎಲ್ಲರಿಗೂ ಗೊತ್ತಿದೆ. ಆ ಇತಿಹಾಸ ಪುನರಾವರ್ತನೆಯಾದರೆ, ಅದು ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂಬರುವ ಐಪಿಎಲ್​ 2026 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿರುವ ಅಫ್ಘಾನಿಸ್ತಾನ ಸ್ಪಿನ್ನರ್, ಭಾರತವು ಅಫ್ಘಾನಿಸ್ತಾನಕ್ಕೆ 'ಆಪ್ತ ಸ್ನೇಹಿತ' ಎಂದು ಹೇಳಿದ್ದಾರೆ. ಆದಾಗ್ಯೂ, ಅಂತರರಾಷ್ಟ್ರೀಯ ಸಮುದಾಯವು ಒಟ್ಟಾಗಿ ಬಂದು ಅವರನ್ನು ಬೆಂಬಲಿಸುವಂತೆ ಕೇಳಿಕೊಂಡರು. 
ಭಾರತ ನಮ್ಮ ಆಪ್ತ ಮಿತ್ರ ಇಂತಹ ವಿಷಯಗಳು ಸಂಭವಿಸದಂತೆ ತಡೆಯಲು ನಾವು ಅವರೊಂದಿಗೆ ಸಂವಹನ ನಡೆಸಲು ಮುಂದಾಗುತ್ತೇವೆ. ಇತರ ದೇಶಗಳಿಗೂ ಇದು ನಮ್ಮ ವಿನಂತಿ. ಪ್ರಸ್ತುತ ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇದು ಯಾರಿಗೂ ಒಳ್ಳೆಯದಲ್ಲ ಎಂದು ಹೇಳಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net