

ಬೆಲ್ಫಾಸ್ಟ್: ಅಫ್ಘಾನಿಸ್ತಾನ ತಂಡ ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ (
2027 ODI World Cup
) ನೇರ ಅರ್ಹತೆ ಖಚಿತಪಡಿಸಿಕೊಂಡಿದೆ. ಆತಿಥೇಯ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ 3 ವಿಕೆಟ್ಗಳಿಂದ ಗೆಲುವು ದಾಖಲಿಸುವ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್ ಟಿಕೆಟ್ ಒಲಿಸಿಕೊಂಡಿದೆ.
ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನ ಕಾಯ್ದುಕೊಂಡಿದೆ. ಇದರಿಂದ ಅಫ್ಘಾನಿಸ್ತಾನ 4ನೇ ಬಾರಿ ಏಕದಿನ ವಿಶ್ವಕಪ್ನಲ್ಲಿ ಆಡುವುದು ಖಚಿತಗೊಂಡಿದೆ. ಏಕದಿನ ವಿಶ್ವಕಪ್ಗೆ ಆತಿಥೇಯ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಜತೆಗೆ ಐಸಿಸಿ ರ್ಯಾಂಕಿಂಗ್ನ ಅಗ್ರ ತಂಡಗಳಾದ ಭಾರತ, ನ್ಯೂಜಿಲೆಂಡ್, ಆಸ್ಟ್ರೆಲಿಯಾ, ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ ಈಗಾಗಲೆ ನೇರ ಅರ್ಹತೆ ಒಲಿಸಿಕೊಂಡಿದ್ದವು. ರ್ಯಾಂಕಿಂಗ್ನಲ್ಲಿ 10ನೇ ಸ್ಥಾನಕ್ಕೆ ಕುಸಿದಿರುವ ವೆಸ್ಟ್ ಇಂಡೀಸ್ ಈ ಬಾರಿಯೂ ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ. ಅರ್ಹತಾ ಸುತ್ತಿನಿಂದ ಉಳಿದ 4 ತಂಡಗಳು ವಿಶ್ವಕಪ್ಗೆ ಪ್ರವೇಶ ಪಡೆಯಲಿವೆ.