ಬುಮ್ರಾರನ್ನು 'ಫುಟ್‌ಬಾಲರ್' ಎಂದು ಎಡವಟ್ಟು ಮಾಡ್ಕೊಂಡ ಮೆಗಾ ಸ್ಟಾರ್​ ರಾಮ್​ ಚರಣ್ ​; ಎಕ್ಸ್​ನಲ್ಲಿ ಸಮಜಾಯಿಷಿ ಕೊಟ್ಟುಕೊಂಡಿದ್ದು ಹೀಗೆ..Ram Charan

Ram Charan
Ram Charan
Published on

ಪ್ರಮುಖ ಮುಖ್ಯಾಂಶಗಳು

  • ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾರನ್ನು 'ಫುಟ್‌ಬಾಲ್ ಆಟಗಾರ' ಎಂದ ನಟ ರಾಮ್ ಚರಣ್.
  • ರಾಮ್ ಚರಣ್ ಅವರ ಈ ಎಡವಟ್ಟಿನ ವಿಡಿಯೋ ಭಾರಿ ವೈರಲ್, ನೆಟ್ಟಿಗರಿಂದ ಟೀಕೆ.
  • ಹೆಸರುಗಳನ್ನು ನೆನಪಿಟ್ಟುಕೊಳ್ಳುವಲ್ಲಿ ನಾನು ಮರೆಗುಳಿ ಎಂದು ಕ್ಷಮೆ ಕೋರಿದ ರಾಮ್​ ಚರಣ್.
Ram Charan said  Jasprit Bumrah footballer:  ಪೆದ್ದಿ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಟಾಲಿವುಡ್​ನ ಸ್ಟಾರ್ ನಟ ರಾಮ್​ಚರಣ್ ಅವರು  ಜಸ್‌ಪ್ರೀತ್ ಬುಮ್ರಾ  ಅವರಿಗೆ ಫುಲ್​ಬಾಲ್ ಆಟಗಾರ ಎಂದು ಕರೆದು ಪೇಚಿಗೆ ಸಿಲುಕಿದ್ದರು. ಸದ್ಯ ಆ ಬಗ್ಗೆ ಎಕ್ಸ್​ನಲ್ಲಿ  ಕ್ಷಮೆಯಾಚಿಸಿ, ಇದು ಮಾನವ ಸಹಜ ತಪ್ಪು. ನಾನು ನಿಮ್ಮ ಆಟದ ವಿಧಾನಕ್ಕೆ ಫ್ಯಾನ್​ ಎಂದು ಸಮಜಾಯಿಷಿ ಕೊಟ್ಟುಕೊಂಡಿದ್ದಾರೆ.
ಭೋಪಾಲ್‌ನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ 'ಪೆದ್ದಿ ಸಿನಿಮಾದ ಭವ್ಯ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಎಆರ್​ ರೆಹಮಾನ್​, ಜಾನ್ವಿ ಕಪೂರ್​ ಸೇರಿದಂತೆ ಸಿನಿಮಾ ತಂಡ ಸೇರಿತ್ತು. ಇದು ಗ್ರಾಮೀಣ ಕ್ರೀಡೆಯಾಧಾರಿತ ಸಿನಿಮಾವಾದ ಕಾರಣ ನಿರೂಪಕರು ರಾಮ್​ ಚರಣ್​ ಅವರಿಗೆ ಕೆಲವು ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರು.

ಕ್ರಿಕೆಟ್​ ಬಗ್ಗೆ ಪ್ರಶ್ನೆ

ರಾಮ್​ ಚರಣ್​ ಅವರಿಗೆ ಕೇಳಿದ್ದ ಪ್ರಶ್ನೆಗಳು ಹೀಗಿತ್ತು, ಸಚಿನ್​ ತೆಂಡೂಲ್ಕರ್​ ಎಂದು ಹೆಸರು ಕೇಳಿದಾಗ ನಿಮಗೆ ನೆನಪಾಗೋದು ಏನು ಎಂದಿದ್ದಾರೆ. ಇದಕ್ಕೆ ರಾಮ್​ಚರಣ್​ ಅವರು,  "ಲಾಂಗ್ ಲೆಜೆಂಡರಿ ರನ್" ಎಂದು ಹೇಳಿದರು. ಎಂ.ಎಸ್. ಧೋನಿ ಅವರಿಗೆ "ಕಾಮ್ ಅಂಡ್ ಕೂಲ್", ರೋಹಿತ್ ಶರ್ಮಾಗೆ "ಎವರಿವನ್ಸ್ ಮ್ಯಾನ್  ಮತ್ತು ವಿರಾಟ್ ಕೊಹ್ಲಿಗೆ "ಫೈರ್" ಎಂದು ಬಣ್ಣಿಸಿದರು.
ವಿಡಿಯೋದಲ್ಲಿ ಏನಿದೆ?
ಜಸ್ಪ್ರೀತ್​ ಬುಮ್ರಾ ಅವರ ಹೆಸರನ್ನು ಹೇಳಿದಾಗ ರಾಮ್​ಚರಣ್​ ಅವರು ನಾನು ನಿಮ್ಮ ದೊಡ್ಡ ಅಭಿಮಾನಿ. ನನಗೆ ಫುಟ್‌ಬಾಲ್ ಎಂದರೆ ತುಂಬಾ ಇಷ್ಟ, ಮತ್ತು ನೀವು ಅದನ್ನು ಇನ್ನಷ್ಟು ಮುಂದೆ ಕೊಂಡೊಯ್ಯುತ್ತಿದ್ದೀರಿ. ಲವ್ ಯೂ ಸರ್,ಎಂದಿದ್ದರು. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜಸ್ಪ್ರೀತ್ ಬುಮ್ರಾ ಅವರನ್ನು ಫುಟ್ಬಾಲ್ ಆಟಗಾರನನ್ನಾಗಿ ಮಾಡಿಬಿಟ್ಟರು ಲೊಲ್​ ಎಂದು ಕಾಮೆಂಟ್ ಮಾಡುತ್ತಿದ್ದರು.
ರಾಮ್​ಚರಣ್​ ಟ್ವೀಟ್​ನಲ್ಲಿ ಹೀಗಿದೆ..
ನಟ ರಾಮಚರಣ್​ ಎಡವಟ್ಟು ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗುತ್ತಲೇ ಎಚ್ಚೆತ್ತ ಅವರು ಎಕ್ಸ್​​ನಲ್ಲಿ ಕ್ಷಮೆಯಾಚಿಸಿದ್ದಾರೆ. ಉಫ್​ ಕೆಲವೊಮ್ಮೆ ಹೆಸರುಗಳು ಕನ್ಫ್ಯೂಸ್ ಆಗುತ್ತವೆ. ಎಲ್ಲವನ್ನು ಮರೆತು ಬಿಡುತ್ತೇನೆ. ಸಿನಿಮಾದ ಹಾಡು  ರಿಲೀಸ್ ಕಾರ್ಯಕ್ರಮದ ವೇಳೆ ಇದ್ದ ಗದ್ದಲ, ಉತ್ಸಾಹ ಎಲ್ಲದರ ಮಧ್ಯೆ ನನ್ನನ್ನು ನಾನೇ ಮರೆತಿದ್ದೆ. ಇದೊಂದು ಮಾನವ ಸಹಜ ತಪ್ಪು. ಜಸ್ಪ್ರೀತ್​ ಬುಮ್ರಾ ಜೀ, ಈ ಗೊಂದಲಕ್ಕೆ ಆದ ತಪ್ಪನ್ನು ದಯವಿಟ್ಟು ಕ್ಷಮಿಸಿ. ನಾನು ನಿಮ್ಮ ಆಟವನ್ನು ನಿಜವಾಗಿಯೂ ಗೌರವಿಸುತ್ತೇನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನೀವು ನಿರಂತರವಾಗಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವಾಗ ಪ್ರತಿ ಭಾರತೀಯನೂ ಹೆಮ್ಮೆ ಪಡುವಂತೆ ಮಾಡುತ್ತೀರಿ ಎಂದು ಬರೆದುಕೊಂಡಿದ್ದಾರೆ.
ಬುಚ್ಚಿ ಬಾಬು ನಿರ್ದೇಶನದ ಪೆದ್ದಿ ಸಿನಿಮಾವು ಜೂನ್​4ರಂದು ದೇಶದಾದ್ಯಂತ ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಲಿದೆ.  ಜೂನ್​3ರಂದು ಪ್ರೀಮಿಯರ್​ ಪ್ರದರ್ಶನಗಳಿದ್ದು,  ಕನ್ನಡ ತೆಲು, ತಮಿಳು ಸೇರಿದಂತೆ ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಿನಿಮಅ ರಿಲೀಸ್ ಆಗಲಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net