ಗೌತಮ್ ಗಂಭೀರ್ ಮನೆಯ ಔತಣಕೂಟದಿಂದ ಅರ್ಧಕ್ಕೇ ಹೊರಬಂದ ಅಭಿಷೇಕ್ ಶರ್ಮಾ! ಟೀಮ್ ಇಂಡಿಯಾ ಪಾರ್ಟಿಯಲ್ಲಿ ನಡೆದಿದ್ದೇನು? Abhishek Sharma

ಗೌತಮ್​ ಗಂಭೀರ್​ ಮನೆಯಿಂದ ಹೊರನಡೆಯುತ್ತಿರುವ ಅಭಿಷೇಕ್​ ಶರ್ಮಾ
ಗೌತಮ್​ ಗಂಭೀರ್​ ಮನೆಯಿಂದ ಹೊರನಡೆಯುತ್ತಿರುವ ಅಭಿಷೇಕ್​ ಶರ್ಮಾ
Published on

ಪ್ರಮುಖ ಮುಖ್ಯಾಂಶಗಳು

  • ಕೋಚ್​ ಗೌತಮ್​ ಗಂಭೀರ್​ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟ
  • ಔತಣಕೂಟದಿಂದ ಒಬ್ಬರೆ ಹೊರನಡೆದ ಅಭಿಷೇಕ್​ ಶರ್ಮಾ
  • ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾದ ಘಟನೆ
ನವದೆಹಲಿ: ಭಾರತ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಅಭಿಷೇಕ್​ ಶರ್ಮಾ (Abhishek Sharma) ಭಾನುವಾರ ಕೋಚ್​ ಗೌತಮ್​ ಗಂಭೀರ್ ಏರ್ಪಡಿಸಿದ್ದ ಔತಣ ಕೂಟದಿಂದ ಒಬ್ಬರೇ ಹೊರನಡೆದ ಘಟನೆ ಈಗ ಸಾಮಾಜಿಕ ಮಾಧ್ಯಮದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ನಡೆಯುತ್ತಿರುವ ಟಿ.20 ವಿಶ್ವಕಪ್​ ಪಂದ್ಯಾವಳಿಯಲ್ಲಿ ಫೆಬ್ರವರಿ 12 ರಂದು ಭಾರತ ದೆಹಲಿಯ ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ  ನಮಿಬೀಯಾ ವಿರುದ್ಧ ಕಣಕ್ಕಿಳಿಯಲಿದ್ದು, ಈ ಪಂದ್ಯಕ್ಕೂ ಮೊದಲು ತಂಡದ ಹೆಡ್ ಕೋಚ್​ ಗೌತಮ್​ ಗಂಭೀರ್​ ಅವರ ನಿವಾಸದಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ತಮ್ಮ ನಿವಾಸಕ್ಕೆ ಆಗಮಿಸಿದ ಟೀಮ್​ ಇಂಡಿಯಾದ ಆಟಗಾರರನ್ನು ಮತ್ತು ತಂಡದ ಸಿಬ್ಬಂದಿಗಳನ್ನು ಗೌತಮ್​ ಗಂಭೀರ್, ಅವರ ಪತ್ನಿ ನತಾಶಾ, ಪುತ್ರಿಯರಾದ ಆಜೀನ್ ಮತ್ತು ಅನೈಜಾ ಹಾರ್ದಿಕವಾಗಿ ಸ್ವಾಗತಿಸಿದರು.
ಸಂಜೆ ಹೊತ್ತಿಗೆ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು  ಗಂಭೀರ್​ ಅವರ ನಿವಾಸವನ್ನು ತಲುಪಿದ್ದರು. ಆದರೆ ಈ ಔತಣಕೂಟದಿಂದ ಅಭಿಷೇಕ್​ ಶರ್ಮಾ ನಿರ್ಗಮಿಸಿದ್ದು ಏಕೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ ತಂಡದ ಉಳಿದ ಸದಸ್ಯರು ಮಧ್ಯರಾತ್ರಿಯವರೆಗೆ ಗಂಭೀರ್​ ಅವರ ನಿವಾಸದಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ.
ಟಿ20 ಯ ವಿಶ್ವದ ಅಗ್ರಸ್ಥಾನದಲ್ಲಿರುವ ಅಭಿಷೇಕ್​ ಶರ್ಮಾ ಭಾರತ, ಅಮೆರಿಕಾದೊಂದಿಗೆ ಆಡಿದ ಮೊದಲ ಪಂದ್ಯದಲ್ಲಿ ಸೊನ್ನಗೆ ಔಟ್​ ಆಗಿದ್ದಕ್ಕೆ ಹೀಗೇ ಮಾಡಿದರೇ ಎಂದು ಕೆಲವರು ಹೇಳಿದರೆ, ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವ ಕಾರಣ ಅವರು ಗಂಭೀರ್​ ಅವರ ಮನೆಯಿಂದ ಬೇಗ ನಿರ್ಗಮಿಸಿದರು ಎಂದು ಸಾಮಾಜಿಕ ಮಾದ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.
ಫೆ. 12 ರಂದು ನಮೀಬಿಯಾ, 15 ರಂದು ಪಾಕಿಸ್ತಾನ
ಆರಂಭಿಕ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿದ ನಂತರ, ಭಾರತವು ಫೆಬ್ರವರಿ 12 ರಂದು ನಮೀಬಿಯಾವನ್ನು ಎದುರಿಸಲಿದೆ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. 
ಪಾಕಿಸ್ತಾನ ಸರ್ಕಾರವು ಭಾರತದೊಂದಿಗೆ ಫೆಬ್ರವರಿ 15 ರಂದು ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ. ಅದರೂ ಈ ಅನಿಶ್ಚಿತತೆ ಕುರಿತು ಇನ್ನೂ ಸ್ಪಷ್ಟ ಚಿತ್ರಣ ದೊರೆಯದ ಹಿನ್ನಲೆ ಸೂರ್ಯಕುಮಾರ್ ಯಾದವ್​ ನೇತೃತ್ವದ ಭಾರತ ತಂಡ ಕೊಲಂಬೊಗೆ ಪ್ರಯಾಣಿಸಲಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net