ಇನ್ನೂ ವೈಭವ್ ಸೂರ್ಯವಂಶಿ ಆಡುವ ರೀತಿ ನೋಡಿದರೆ, ಅವರು ಭವಿಷ್ಯದಲ್ಲಿ ಕ್ರಿಕೆಟ್ ಅನ್ನು ಆಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ವೈಭವ್ ಅವರು ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದು ಗವಾಸ್ಕರ್ ಹೇಳಿದ್ದಾರೆ. ಅಂದಹಾಗೆ, ವೈಭವ್ ಸೂರ್ಯವಂಶಿ ಇತ್ತೀಚೆಗೆ ತಮ್ಮ 15 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದರೊಂದಿಗೆ, ಅವರಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದೆ. ಮಾರ್ಚ್ 27, 2026 ರಂದು 15 ವರ್ಷ ತುಂಬಿದ ವೈಭವ್, ಐಸಿಸಿಯ ಕನಿಷ್ಠ ವಯಸ್ಸಿನ ಅವಶ್ಯಕತೆಯನ್ನು ಪೂರೈಸಿದ್ದಾರೆ. ಹಿರಿಯ ರಾಷ್ಟ್ರೀಯ ಆಯ್ಕೆಗೆ ಪ್ರಾಥಮಿಕ ಅಡಚಣೆ ಇದೀಗ ನಿವಾರಣೆ ಆಗಿದೆ. ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಹಿರಿಯರ ತಂಡಕ್ಕೆ ಎಂಟ್ರಿಯಾಗುವುದು ಖಚಿತವಾಗಿದೆ, (ಏಜೆನ್ಸೀಸ್).