ಆಸ್ಪತ್ರೆಗೆ ದಾಖಲಾದ ಅಭಿಷೇಕ್ ಶರ್ಮ! ನಮಿಬಿಯಾ ವಿರುದ್ಧದ ಟಿ20 ವಿಶ್ವಕಪ್​ ಪಂದ್ಯ ಆಡೋದು ಬಹುತೇಕ ಡೌಟ್ | Abhishek Sharma ​

ಅಭಿಷೇಕ್ ಶರ್ಮ
ಅಭಿಷೇಕ್ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • ನಮಿಬಿಯಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮ ಬಹುತೇಕ ಡೌಟ್​
  • ಈ ಪಂದ್ಯಕ್ಕೂ ಮೊದಲೇ ಆಸ್ಪತ್ರೆ ಸೇರಿದ ಅಭಿಷೇಕ್​
  • ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್​ ಆಡಿಸಲು ನಿರ್ಧಾರ?
ನವದೆಹಲಿ: ನಾಳೆ (ಫೆ.12) ನಡೆಯಲಿರುವ ನಮಿಬಿಯಾ ವಿರುದ್ಧದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಸ್ಫೋಟಕ ಓಪನರ್ ಅಭಿಷೇಕ್ ಶರ್ಮ ಆಡೋದು ಬಹುತೇಕ ಡೌಟ್ ಆಗಿದೆ. ಅನಾರೋಗ್ಯ ಸಮಸ್ಯೆಯಿಂದ ಅವರು ಆಸ್ಪತ್ರೆ ಪಾಲಾಗಿರುವುದೇ ಇದಕ್ಕೆ ಕಾರಣವಾಗಿದೆ.
'ದೈನಿಕ್ ಜಾಗ್ರಣ್'​ ವರದಿ ಪ್ರಕಾರ, ಕಳೆದ ಯುಎಸ್​ಎ ವಿರುದ್ಧದ ಪಂದ್ಯದಲ್ಲೇ ಅಭಿಷೇಕ್​ ಆರಾಮ್​ ಇರಲಿಲ್ಲ. ವಿಪರೀತ ಜ್ವರದ ಜತೆಗೆ ಹೊಟ್ಟೆ ಭಾಗದಲ್ಲಿ ಕಾಣಿಸಿಕೊಂಡ ನೋವಿನಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಶರ್ಮ ವಾಪಾಸ್​ ಆಗುವ ಭರವಸೆಯಿದೆ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ತಿಳಿಸಿದ್ದಾರೆ.

ಬಿಸಿಸಿಐ ಮಾಹಿತಿ

ಅಭಿಷೇಕ್ ಅವರನ್ನು​ ಹೊಟ್ಟೆಯ ಸೋಂಕಿನಿಂದಾಗಿ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಸ್ಯೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನು ಕೂಡ ತುರ್ತಾಗಿ ಮಾಡಲಾಗಿದೆ. ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತೋ, ಇಲ್ಲವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನವೇ" ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ಮಾಹಿತಿ ನೀಡಿವೆ.

ಅಭಿಷೇಕ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್​?

ಇನ್ನು ನಾಳೆ ನಡೆಯಲಿರುವ ನಮಿಬಿಯಾ ವಿರುದ್ಧ ಟಿ20 ವಿಶ್ವಕಪ್ ಪಂದ್ಯಕ್ಕೆ ಅಭಿಷೇಕ್​ ಅನುಪಸ್ಥಿತಿ ಟೀಮ್ ಇಂಡಿಯಾಗೆ ಕಾಡಲಿದ್ದು, ಆರಂಭಿಕ ಬ್ಯಾಟರ್​ ಸ್ಥಾನಕ್ಕೆ ಯಾರನ್ನು ಆಡಿಸಬಹುದು ಮ್ಯಾನೇಜ್​ಮೆಂಟ್​ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಗೌತಮ್ ಗಂಭೀರ್ ನೇತೃತ್ವದ ತಂಡ ಈಗಾಗಲೇ ನಿರ್ಧರಿಸಿದ್ದು, ಸಂಜು ಸ್ಯಾಮ್ಸನ್​ರನ್ನು ಅಭಿಷೇಕ್​ ಬದಲಿಗೆ ಆಡಿಸಲು ಮುಂದಾಗಿದೆ ಎಂದು ಕ್ರಿಕೆಟ್​ ವರದಿಗಳು ತಿಳಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net