ಅಭಿಷೇಕ್​ ಆರ್ಭಟ... ಟಿ20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾಗೆ ಎಚ್ಚರಿಕೆ ನೀಡಿದ ಅಂಜಿಕ್ಯ ರಹಾನೆ! Abhishek Sharma

ಟೀಮ್ ಇಂಡಿಯಾ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ
ಟೀಮ್ ಇಂಡಿಯಾ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್-2026 ಟೂರ್ನಿಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಕ್ರಿಕೆಟಿಗ ಅಜಿಂಕ್ಯ ರಹಾನೆ ಎಚ್ಚರಿಕೆ
  • ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಕುರಿತು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ ರಹಾನೆ
  • ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್​ ಡಕ್ ಔಟ್ ಆಗುವ ಅಪಾಯವಿದೆ ಎಂದು ಎಚ್ಚರಿಸಿದ ಅಜಿಂಕ್ಯ ರಹಾನೆ
Abhishek Sharma : ಟಿ20 ವಿಶ್ವಕಪ್-2026 ಟೂರ್ನಿಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ, ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಕ್ರಿಕ್​ಬಜ್​ ಜತೆ ಮಾತನಾಡಿದ ರಹಾನೆ, ಟಿ20 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ, ಅಭಿಷೇಕ್ ಶರ್ಮ ಸ್ವಲ್ಪ ಎಚ್ಚರಿಕೆಯಿಂದ ಆಡಬೇಕು. ಏಕೆಂದರೆ, ಅವರ ಇನ್ನಿಂಗ್ಸ್ ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯ. ಅಭಿಷೇಕ್ ಅವರು ಸಾಕಷ್ಟು ಅಪಾಯದೊಂದಿಗೆ ಆಡುತ್ತಿದ್ದಾರೆ. ಅವರೇನಾದರೂ ಅದೇ ರೀತಿ ಆಡಿದರೆ, ವಿಶ್ವಕಪ್‌ನಲ್ಲೂ ಡಕ್ ಔಟ್ ಆಗುವ ಅಪಾಯವಿದೆ ಎಂದು ಅಜಿಂಕ್ಯ ರಹಾನೆ ಎಚ್ಚರಿಸಿದ್ದಾರೆ.
ಅಂದಹಾಗೆ, ಟಿ20 ವಿಶ್ವಕಪ್ ಟೂರ್ನಿಯು ಇನ್ನೊಂದು ಒಂದು ವಾರದಲ್ಲಿ ಪ್ರಾರಂಭವಾಗಲಿದೆ. ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಈ ಮೆಗಾ ಟೂರ್ನಿ ನಡೆಯಲಿದೆ. ಈ ಸಂದರ್ಭದಲ್ಲಿ, ಅಜಿಂಕ್ಯ ರಹಾನೆ ಟೀಮ್ ಇಂಡಿಯಾಕ್ಕೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ಹೈ-ರಿಸ್ಕ್‌ನೊಂದಿಗೆ ಆಡುತ್ತಿರುವ ಅಭಿಷೇಕ್ ಶರ್ಮ ಟಿ20 ವಿಶ್ವಕಪ್​ನಲ್ಲಿ ಡಕ್ ಔಟ್​ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅಜಿಂಕ್ಯ ರಹಾನೆ ಹೇಳಿಕೆ ನೀಡಿದ್ದಾರೆ. ಅವರ ಆಟದ ಶೈಲಿ ತುಂಬಾ ಭಯಾನಕವಾಗಿದೆ. ಟಿ20 ಕ್ರಿಕೆಟ್​ನಲ್ಲಿ ಅಭಿಷೇಕ್ ಶರ್ಮ ಅವರಂತೆ ಆಡಬೇಕು ನಿಜ ಆದರೆ, ರಿಸ್ಕ್ ಇಲ್ಲದೆ ಬ್ಯಾಟಿಂಗ್ ಮಾಡುವುದು ತುಂಬಾ ಮುಖ್ಯ. ಅಭಿಷೇಕ್ ಅವರು ರಿಸ್ಕ್ ತೆಗೆದುಕೊಂಡು ಭಯಾನಕ ಹೊಡೆತಗಳನ್ನು ಆಡುತ್ತಿದ್ದಾರೆ. ಆ ರೀತಿ ಆಡಿದರೆ, ಕೆಲವೊಮ್ಮೆ ಯಶಸ್ವಿಯಾಗುತ್ತಾರೆ. ಆದರೆ, ಕೆಲವೊಮ್ಮೆ ಡಕ್ ಆಗುವುದು ಕೂಡ ಗ್ಯಾರಂಟಿ ಎಂದು ರಹಾನೆ ಹೇಳಿದರು.
ಅಭಿಷೇಕ್ ಶರ್ಮ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಅಂತಹ ಆಟಗಾರ ಕೊನೆಯವರೆಗೂ ಬ್ಯಾಟಿಂಗ್ ಮಾಡಬೇಕು. ಆಗ ಮಾತ್ರ ಭಾರತ ಗೆಲ್ಲುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಬ್ಯಾಟಿಂಗ್ ಮಾಡುವಂತೆ ಅಭಿಷೇಕ್ ಶರ್ಮರಿಗೆ ರಹಾನೆ ಸಲಹೆ ನೀಡಿದರು.
ಪಾಕಿಸ್ತಾನವು ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಿತ್ತು. ಇದೀಗ ಉಲ್ಟಾ ಹೊಡೆದಿದ್ದು, ಸದ್ದಿಲ್ಲದೇ ಶ್ರೀಲಂಕಾಗೆ ಪ್ರಯಾಣಿಸಲು ಸಜ್ಜಾಗಿದೆ. ಈ ವಿಚಾರವಾಗಿ ಮೊದಲೇ ಮಾತನಾಡಿದ ಅಜಿಂಕ್ಯ ರಹಾನೆ, ಪಾಕಿಸ್ತಾನಕ್ಕೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲ. ಪಾಕ್​ ಖಂಡಿತವಾಗಿಯೂ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಆಡುತ್ತದೆ. ಪಂದ್ಯಾವಳಿಯನ್ನು ಆಡಲು ಶ್ರೀಲಂಕಾಕ್ಕೆ ಬರುತ್ತದೆ ಎಂದು ಹೇಳಿದ್ದರು. ಅದೇ ರೀತಿ, ಪಾಕಿಸ್ತಾನ ತಂಡ, ಶ್ರೀಲಂಕಾಗೆ ತೆರಳಲು ಈಗಾಗಲೇ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದೆ ಎಂಬ ಮಾಹಿತಿ ಇದೆ.
ಅಂದಹಾಗೆ, ಫೆಬ್ರವರಿ 15 ರಂದು ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯವು ಕೊಲಂಬೊದಲ್ಲಿ ನಡೆಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net