ಪ್ರಸ್ತುತ ಕೇವಲ 15 ವರ್ಷ ವಯಸ್ಸಿನವರಾಗಿರುವ ಸ್ಫೋಟಕ ಬ್ಯಾಟರ್ ವೈಭವ್, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಮೂರು ವರ್ಷಗಳು ಅಂದರೆ 18 ವರ್ಷ ತುಂಬುವವರೆಗೆ ಕಾಯಬೇಕಾಗಿದೆ. ಅಲ್ಲಿಯವರೆಗೂ ವೈಭವ್ ಕಾರು ಚಾಲನೆ ಮಾಡುವಂತಿಲ್ಲ. ಹೀಗಾಗಿ, ಕಾರಿನ ಕುರಿತು ತಮ್ಮ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸೂರ್ಯವಂಶಿ, ನನ್ನ ಸಮಯ ಬರುವವರೆಗೆ ನಾನು ಕಾಯುತ್ತೇನೆ, ಅಲ್ಲಿಯವರೆಗೆ ನನ್ನ ತಂದೆ ಕಾರನ್ನು ಚಲಾಯಿಸಲಿದ್ದಾರೆ ಎಂದು ಅತ್ಯಂತ ಪ್ರಬುದ್ಧವಾಗಿ ಉತ್ತರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.