ಐಪಿಎಲ್ 2026ರಲ್ಲಿ ಆರ್‌ಸಿಬಿ ತಂಡದ ಪ್ರಶಸ್ತಿ ಗೆಲುವನ್ನು ನೇರವಾಗಿಯೇ ವೀಕ್ಷಿಸಿ ಅಪಾರ ಸಂತಸಗೊಂಡ ಎಬಿ ಡಿ ವಿಲಿಯರ್ಸ್, ಮುಂಬೈನ ಮೈದಾನದಲ್ಲಿ ಸ್ಥಳೀಯ ಆಟಗಾರರೊಂದಿಗೆ ಮುಕ್ತವಾಗಿ ಮಾತನಾಡುತ್ತಾ, ಅಭಿಮಾನಿಗಳ ಜೊತೆ ಫೋಟೋಗಳಿಗೆ ಪೋಸ್ ನೀಡಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ, ತಮ್ಮದೇ ವಿಶಿಷ್ಟ ಶೈಲಿಯ ಕೆಲವು ವಿಭಿನ್ನ ಶಾಟ್‌ಗಳನ್ನು ಬಾರಿಸುವ ಮೂಲಕ ಮೈದಾನದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ 'ಮಿಸ್ಟರ್ 360' ಬ್ಯಾಟಿಂಗ್ ಮ್ಯಾಜಿಕ್ ಅನ್ನು ಮತ್ತೊಮ್ಮೆ ಕಣ್ಣಾರೆ ಕಂಡು ಆನಂದಿಸುವ ಸುವರ್ಣಾವಕಾಶವನ್ನು ಮಾಡಿಕೊಟ್ಟರು.