ಅಂದಹಾಗೆ, ನಂಬರ್ 1 ಸ್ಥಾನದಲ್ಲಿ ಆಸ್ಟ್ರೇಲಿಯಾದ ಕ್ಯಾಮೆರಾನ್ ಗ್ರೀನ್ ಇರುತ್ತಾರೆ. ಯಾರೂ ಕೂಡ ಅವರ ಹತ್ತಿರಕ್ಕೂ ಬರಲಾಗದು. ಅಂತಿಮ ಬೆಲೆ ಎಷ್ಟಾದರು ಇರಬಹುದು ಆದರೆ, ಗರಿಷ್ಠ 18 ಕೋಟಿ ರೂಪಾಯಿಯಂತೂ ಗ್ರೀನ್ಗೆ ಸಿಗಲಿದೆ. ಒಂದು ವೇಳೆ ಸರಿಯಾಗಿ ಬಿಡ್ಡಿಂಗ್ ನಡೆದರೆ, ಕೆಕೆಆರ್ ಮತ್ತು ಸಿಎಸ್‌ಕೆ ಪೈಪೋಟಿ ನಡೆಸಲಿದೆ. ವಾಸ್ತವವಾಗಿ ಗ್ರೀನ್ ಅವರು 25 ರಿಂದ 28 ಕೋಟಿ ರೂಪಾಯಿವರೆಗೂ ಬಿಕರಿಯಾಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದರು, (ಏಜೆನ್ಸೀಸ್).