ಭಾರತ ಕಿರಿಯರ ಶುಭಾರಂಭ: ಮಿಂಚಿದ ಕನ್ನಡಿಗ ರಾಹುಲ್ ದ್ರಾವಿಡ್ ಕಿರಿಯ ಮಗ, ಸೆಹ್ವಾಗ್ ಹಿರಿಯ ಪುತ್ರ ಪದಾರ್ಪಣೆ

ಭಾರತ ಕಿರಿಯರ ಶುಭಾರಂಭ: ಮಿಂಚಿದ ಕನ್ನಡಿಗ ರಾಹುಲ್ ದ್ರಾವಿಡ್ ಕಿರಿಯ ಮಗ, ಸೆಹ್ವಾಗ್ ಹಿರಿಯ ಪುತ್ರ!
ಭಾರತ ಕಿರಿಯರ ಶುಭಾರಂಭ: ಮಿಂಚಿದ ಕನ್ನಡಿಗ ರಾಹುಲ್ ದ್ರಾವಿಡ್ ಕಿರಿಯ ಮಗ, ಸೆಹ್ವಾಗ್ ಹಿರಿಯ ಪುತ್ರ!
Published on
ರಾಜ್‌ಕೋಟ್: ಭಾರತ ಕಿರಿಯರ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಶುಭಾರಂಭ ಕಂಡಿದೆ. ಯಶ್‌ವರ್ಧನ್ ಚೌಹಾಣ್ (54 ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್, 28ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯಿಂದ ಮಳೆ ಬಾಧಿತ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 7 ರನ್‌ಗಳ ರೋಚಕ ಗೆಲುವು ಒಲಿಸಿಕೊಂಡಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.
ಭಾರಿ ಮಳೆಯಿಂದಾಗಿ ನಿರಂಜನ್ ಷಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ತಲಾ 20 ಓವರ್‌ಗೆ ಇಳಿಸಲಾಯಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, ಯಶ್‌ವರ್ಧನ್ ಚೌಹಾಣ್ ಅರ್ಧಶತಕದ ಜತೆಗೆ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ (28) ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ (38 ರನ್, 18 ಎಸೆತ, 2 ಬೌಂಡರಿ, 3 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 20 ಓವರ್‌ನಲ್ಲಿ 6 ವಿಕೆಟ್‌ಗೆ 182 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಪ್ರತಿಯಾಗಿ ನಾಯಕ ಜಾಕ್ ಸ್ಜೋಸ್ನೆಕ್ (55 ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಹೊರತಾಗಿಯೂ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಪುತ್ರನ ಪದಾರ್ಪಣೆಯ ಪಂದ್ಯಕ್ಕೆ ವೀರೇಂದ್ರ ಸೆಹ್ವಾಗ್ ಸಾಕ್ಷಿಯಾದರು. ಎರಡನೇ ಪಂದ್ಯ ಸೋಮವಾರ ರಾಜ್‌ಕೋಟ್‌ನಲ್ಲೇ ನಡೆಯಲಿದೆ.
ಭಾರತ: 7 ವಿಕೆಟ್‌ಗೆ 182 (ಆರ್ಯವೀರ್ 28, ಲಕ್ಷ್ಯ 15, ಕುಶಾಗ್ರ 16, ಯಶ್‌ವರ್ಧನ್ 54, ಅರ್ಜುನ್ 15, ಅನ್ವಯ್ 38, ಯಶ್‌ವೀರ್ 7*, ಬ್ರೇನ್ 29ಕ್ಕೆ 2, ಸ್ಪೆನ್ಸರ್ 43ಕ್ಕೆ 2).
ಆಸ್ಟ್ರೇಲಿಯಾ: 7 ವಿಕೆಟ್‌ಗೆ 175 (ನೀಲ್ ಪಟೇಲ್ 45, ಹೇಡನ್ 40, ಹೋಲಿಕ್ 24, ಜಾಕ್ 55, ಬ್ಲೇಕ್ 2, ಯಶ್‌ಬರ್ದನ್ 28ಕ್ಕೆ 2, ಅರ್ಜುನ್ 11ಕ್ಕೆ 1). ಪಂದ್ಯಶ್ರೇಷ್ಠ: ಯಶ್‌ವರ್ಧನ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net