ಹಾರ್ದಿಕ್ ಬದುಕಿನಲ್ಲಿ ಹೊಸ ಇನ್ನಿಂಗ್ಸ್: ಗೆಳತಿ ಜನ್ಮದಿನಕ್ಕೆ ರೊಮ್ಯಾಂಟಿಕ್ ವಿಶ್! | Hardik Pandya

Hardik Pandya
Hardik Pandya
Published on

ನವದೆಹಲಿ: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ಪಾಂಡ್ಯ(Hardik Pandya) ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯದ ಬಗ್ಗೆ ಮೌನ ಮುರಿದಿದ್ದಾರೆ.

ಹೌದು,ಗುರುವಾರಬೆಳಿಗ್ಗೆ ತಮ್ಮ ಗೆಳತಿ, ನಟಿ ಹಾಗೂ ಮಾಡೆಲ್ ಮಹಿಕಾ ಶರ್ಮಾ ಅವರ ಜನ್ಮದಿನದ ಅಂಗವಾಗಿ ಇನ್‌ಸ್ಟಾಗ್ರಾಮ್‌ನಲ್ಲಿಆತ್ಮೀಯ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, "ಜನ್ಮದಿನದ ಶುಭಾಶಯಗಳು ನನ್ನ ರಾಜಕುಮಾರಿ"(Happy birthday my princess) ಎಂದು ಬರೆದುಕೊಂಡಿದ್ದಾರೆ.

2024ರ ಜುಲೈನಲ್ಲಿನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದಿದ್ದ ಹಾರ್ದಿಕ್, ಸುಮಾರು ಒಂದು ವರ್ಷದ ಬಳಿಕ ಅಂದರೆ2025ರ ಅಕ್ಟೋಬರ್‌ನಲ್ಲಿ ಮಹಿಕಾ ಶರ್ಮಾ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಸದ್ಯ ಈ ಜೋಡಿಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು, ಹಾರ್ದಿಕ್ ಪುತ್ರ ಅಗಸ್ತ್ಯನ ಜೊತೆಗೂ ಮಹಿಕಾಸಮಯ ಕಳೆಯುತ್ತಿರುವುದು ಈ ಸಂಬಂಧದ ಬಗ್ಗೆ ಎತ್ತಿ ತೋರಿಸುತ್ತಿದೆ.

ಆಟದ ಮೇಲೆಮಹಿಕಾ ಪ್ರಭಾವ

ಕೇವಲ ಪ್ರೇಮಸಂಬಂಧ ಮಾತ್ರವಲ್ಲದೆ, ತಮ್ಮ ಕ್ರಿಕೆಟ್ ಬದುಕಿನ ಯಶಸ್ಸಿನಲ್ಲೂ ಮಹಿಕಾ ದೊಡ್ಡ ಪಾತ್ರ ವಹಿಸಿದ್ದಾರೆಎಂದು ಹಾರ್ದಿಕ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಟಿ20 ವಿಶ್ವಕಪ್ ವೇಳೆ ನೀಡಿದ ಸಂದರ್ಶನವೊಂದರಲ್ಲಿಅವರು ಹೀಗೆ ಹೇಳಿದ್ದಾರೆ.

"ಕಳೆದಐಪಿಎಲ್ ಬಳಿಕ ನಾನು ನನ್ನ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ ಎಂದು ಅರಿವಾಯಿತು. ನನ್ನಬ್ಯಾಟಿಂಗ್ ಸಾಮರ್ಥ್ಯದ ಕೇವಲ ಶೇ. 40ರಷ್ಟು ಮಾತ್ರ ನಾನು ಬಳಸಿಕೊಂಡಿದ್ದೆ. ಆ ಸಮಯದಲ್ಲಿ ಮಹಿಕಾನನ್ನ ಜೀವನಕ್ಕೆ ಬಂದರು. ಕಳೆದುಹೋಗಿದ್ದ ಆ ಹಳೆಯ ಆಟದ ಹುಮ್ಮಸ್ಸನ್ನು ಮರಳಿ ತರಲು ಅವರು ನನಗೆ ಸಹಾಯಮಾಡಿದರು." ಎಂದಿದ್ದರು ಹಾರ್ದಿಕ್.

ಪ್ರೇಮದ ಸಂಕೇತವಾಗಿವಿಶೇಷ ಹಚ್ಚೆ (Tattoo)

ತಮ್ಮ ಪ್ರೀತಿಯನ್ನುಶಾಶ್ವತವಾಗಿಸಲು ಹಾರ್ದಿಕ್ ಪಾಂಡ್ಯ 2026ರ ಪ್ರೇಮಿಗಳ ದಿನದಂದು (Valentine’s Day) ಕುತ್ತಿಗೆಯಹಿಂಭಾಗದಲ್ಲಿ ವಿಶೇಷ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ಮಹಿಕಾ ಹೆಸರಿನ ಮೊದಲ ಅಕ್ಷರ 'M'ಜೊತೆಗೆ ಎರಡು ಚಿರತೆಗಳ ಚಿತ್ರವಿದೆ. ಈ ಕುರಿತು ಮಾತನಾಡಿದ ಹಚ್ಚೆ ಕಲಾವಿದ ಸನ್ನಿ ಭಾನುಶಾಲಿ,"ಚಿರತೆಯು ಶಕ್ತಿ ಮತ್ತು ವೇಗದ ಸಂಕೇತ. ಹಾರ್ದಿಕ್ ಮತ್ತು ಮಹಿಕಾ ಒಬ್ಬರಿಗೊಬ್ಬರು ಬಲ ತುಂಬುವಪಾಲುದಾರರು ಎಂಬುದನ್ನು ಈ ವಿನ್ಯಾಸ ಪ್ರತಿನಿಧಿಸುತ್ತದೆ" ಎಂದು ವಿವರಿಸಿದ್ದಾರೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net