ಮೊದಲ ದಿನದಂದು 20 ವಿಕೆಟ್ ಮತ್ತು ಎರಡನೇ ದಿನದಂದು 16 ವಿಕೆಟ್‌ಗಳು ಉರುಳಿದವು. ಪಂದ್ಯವು ಕೇವಲ ಎರಡೇ ದಿನಗಳಲ್ಲಿ ಮುಗಿದ ಕಾರಣ ಮೆಲ್ಬೋರ್ನ್ ಪಿಚ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್ ಗಳಿಸಿದರೆ, ಇಂಗ್ಲೆಂಡ್ 110 ರನ್‌ಗೆ ಆಲೌಟ್ ಆಯಿತು. ಇದು ಆಸ್ಟ್ರೇಲಿಯಾಕ್ಕೆ 42 ರನ್‌ಗಳ ಮುನ್ನಡೆಯನ್ನು ನೀಡಿತು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ 132 ರನ್‌ಗೆ ಪತನಗೊಂಡಿತು.