“ಪುರುಷರ ವಿಭಾಗದಲ್ಲಿ ಭಾರತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದು, ಮಹಿಳೆಯರು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಗೆಲ್ಲುವುದು ಅತ್ಯಂತ ಮುಖ್ಯ. ಈ ಬಾರಿ ವಿಶ್ವಕಪ್‌ನ ಮಾದರಿಯಲ್ಲೂ ಬದಲಾವಣೆ ಆಗಿದ್ದು, ಮೂರು ಹಂತಗಳಲ್ಲಿ ಪಂದ್ಯಗಳು ನಡೆಯಲಿವೆ. ಹೀಗಾಗಿ ಪ್ರತಿಯೊಂದು ಪಂದ್ಯಕ್ಕೂ ಸಮಾನ ಮಹತ್ವ ನೀಡಬೇಕು,” ಎಂದರು.