ಕೊನೆ ಕ್ಷಣದಲ್ಲಿ ಆರ್​ಸಿಬಿಗೆ ಶಾಕ್​! ನಾಳಿನ ಮೊದಲ ಐಪಿಎಲ್​ ಪಂದ್ಯಕ್ಕೆ ಸ್ಟಾರ್​ ಆಟಗಾರ ಅಲಭ್ಯ | RCB vs SRH

ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ಅಲಭ್ಯ
ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ಅಲಭ್ಯ
Published on

ಪ್ರಮುಖ ಮುಖ್ಯಾಂಶಗಳು

  • ನಾಳೆ (ಮಾ.28) ಆರ್​ಸಿಬಿ ಮತ್ತು ಎಸ್​ಆರ್​ಎಚ್​ ನಡುವೆ ಮೊದಲ ಐಪಿಎಲ್​ ಪಂದ್ಯ
  • ಐಪಿಎಲ್​ 19ನೇ ಆವೃತ್ತಿಗೆ ಕ್ಷಣಗಣನೆ ಶುರು
  • ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಎನ್ನುವುದರೊಳಗೆ ಆರ್​ಸಿಬಿ ಸ್ಟಾರ್​ ವೇಗಿಯ ಅಲಭ್ಯತೆ
RCB vs SRH: ನಾಳೆ (ಮಾ.28) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್ ನಡುವಿನ ಐಪಿಎಲ್​ 19ನೇ ಆವೃತ್ತಿಯ ಮೊದಲನೇ ಪಂದ್ಯಕ್ಕೆ ಸದ್ಯ ಕ್ರಿಕೆಟ್​ ಪ್ರೇಮಿಗಳು ಭಾರೀ ಕಾತರ ಹಾಗೂ ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, ಫ್ರಾಂಚೈಸಿಗೆ ಸ್ಟಾರ್​ ವೇಗಿಯ ಲಭ್ಯತೆ ಸಿಕ್ಕರೆ, ಇನ್ನೊಬ್ಬರ ಅಲಭ್ಯತೆ ಕಾಡಿದೆ.
ಕಳೆದ ವರ್ಷ ಫ್ರಾಂಚೈಸಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆಸೀಸ್​ನ ಸ್ಟಾರ್ ವೇಗಿ ಜೋಶ್ ಹೇಜಲ್​ವುಡ್​, ಇಂಜುರಿ ಸಮಸ್ಯೆಯಿಂದ 2026ರ ಐಪಿಎಲ್​ನಲ್ಲಿ ತಂಡದಲ್ಲಿ ಆಡುವುದು ಬಹುತೇಕ ಡೌಟ್​ ಎಂದೇ ಹೇಳಲಾಯಿತು. ಈ ಬಳಿಕ, ಮೊದಲೆರೆಡು ಪಂದ್ಯಕ್ಕೆ ಅವರು ಇರುವುದಿಲ್ಲ ಎನ್ನಲಾಯಿತು. ಆದರೆ, ಫ್ರಾಂಚೈಸಿ ಹಾಗೂ ಐಪಿಎಲ್​ ಟೂರ್ನಿಯ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ತಾವು ತಂಡದ ಪರ ಆಡುವುದಾಗಿ ಜೋಶ್​ ಫ್ಯಾನ್ಸ್​ಗಳಲ್ಲಿ ಇನ್ನಷ್ಟು ಜೋಶ್​ ತಂದಿದ್ದಾರೆ.
ಈಗಾಗಲೇ ಆರ್​ಸಿಬಿ ತಂಡ ಸೇರಿರುವ ಹೇಜಲ್​ವುಡ್​, ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಖುಷಿ ವಿಷಯವಾದರೆ, ಮತ್ತೊಂದೆಡೆ ಶ್ರೀಲಂಕಾ ತಂಡದ ವೇಗಿ ನುವಾನ್​ ತುಷಾರ ಅವರಿಗೆ ಎನ್​ಓಸಿ (ಆಕ್ಷೇಪಣೆ ಇಲ್ಲ ಪ್ರಮಾಣಪತ್ರ) ನೀಡಲು ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ನಿರಾಕರಿಸಿದೆ ಎಂದು ವರದಿಯಾಗಿದೆ. ಮಂಡಳಿಯು ತನ್ನ ಆಟಗಾರರು ಕೆಲವು ಫಿಟ್‌ನೆಸ್ ಮಾನದಂಡಗಳನ್ನು ಪೂರೈಸಿದರೆ ಮಾತ್ರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಹೀಗಾಗಿ, ಬೆಂಗಳೂರು ಬೌಲಿಂಗ್​ ಯೂನಿಟ್​ಗೆ ಅವರ ಅಲಭ್ಯತೆ ಎದುರಾಗಲಿದೆ.

'ಕಿಂಗ್'​ ನೋಡಲು ಉತ್ಸುಕತೆ ಜೋರು

ಇನ್ನು ಐಪಿಎಲ್​ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗೆ ಆಡಿಕೊಂಡು ಬಂದಿರುವ ಏಕೈಕ ಆಟಗಾರ ವಿರಾಟ್​ ಕೊಹ್ಲಿ. ಅಭಿಮಾನಿಗಳ ನೆಚ್ಚಿನ 'ಕಿಂಗ್'​ರನ್ನು ವರ್ಷಕ್ಕೊಮ್ಮೆ ಮೈದಾನದಲ್ಲಿ ಕಣ್ತುಂಬಿಕೊಳ್ಳುವ ಖುಷಿ, ಉತ್ಸುಕತೆ ಆರ್​ಸಿಬಿ ಫ್ಯಾನ್ಸ್​ಗಳದ್ದು. ಇಡೀ ತಂಡವನ್ನು ಎಷ್ಟರ ಮಟ್ಟಿಗೆ ಬೆಂಬಲಿಸಲು ಬರುತ್ತಾರೋ, ಅದಕ್ಕಿಂತ ಮುಖ್ಯವಾಗಿ, ಮಿಗಿಲಾಗಿ 'ರನ್​ಮಷಿನ್'​ರನ್ನು ನೋಡಲು ಫ್ಯಾನ್ಸ್​ ಮುಗಿಬೀಳುವುದು ನಿಜಕ್ಕೂ ವಿರಾಟ್​ ಮೇಲಿನ ಅಪಾರ ಅಭಿಮಾನವನ್ನು ಸಾಬೀತುಪಡಿಸುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net